ಕಾರ್ಕಳ : ಮಹಾ ಭಾರತ ಭಾವ ದೀಪ

0
22

ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ,ಅಲ್ಲಮಪ್ರಭು ಪೀಠ ಕಾಂತಾವರ ಜಂಟಿಯಾಗಿ ಹೋಟೆಲ್ ಪ್ರಕಾಶದಲ್ಲಿ ಆಯೋಜಿಸಿದ ಮಹಾಭಾರತ ಭಾವದೀಪ ವರ್ಷ ಪೂರ್ತಿ ಮಹಾಭಾರತ ಉಪನ್ಯಾಸ ಮಾಲಿಕೆಯ ತೃತೀಯ ಸೋಪಾನ ಕುರುವಂಶದ ರಾಜ ಕುವರರು ಎಂಬ ವಿಷಯದ ಕುರಿತು ವಿದ್ವಾಂಸ ಡಾ.ವಿನಾಯಕ ಭಟ್ ಗಾಳಿಮನೆ  ಮಹಾಭಾರತದಲ್ಲಿ ಭೀಷ್ಮಾಚಾರ್ಯರ ವ್ಯಕ್ತಿತ್ವದ ಬಗ್ಗೆ ವಿಶೇಷವಾದ ವಿವರಣೆಯನ್ನು ನೀಡುತ್ತಾ ಅವರ ಕರ್ತವ್ಯ ನಿಷ್ಠೆಯನ್ನು ಎಳೆ ಎಳೆಯಾಗಿ ವಿವರಿಸಿದರು.

ಸಾಲ್ವ ರಾಜನ  ವ್ಯಕ್ತಿತ್ವವನ್ನು  ಸಕಾರಾತ್ಮಕವಾಗಿ ವಿವರಿಸಿ ‘ಅಂಬೆ’ ಯ ಪಾತ್ರವನ್ನು ವಿವರಿಸುತ್ತಾ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವುದನ್ನು ನಾವಿಲ್ಲಿ ಕಾಣಬಹುದು ಎಂದರು.
ಭಗವಂತನು ಜನನ- ಮರಣ ವನ್ನು ಅವನ ಕೈಯಲ್ಲಿಟ್ಟು ಕೊಂಡು, ಬದುಕನ್ನು ನಮ್ಮ ಕೈಯಲ್ಲಿಟ್ಟನು. ತ್ಯಾಗ -ಭೋಗದ ಸಮನ್ವಿತ ಬದುಕು ಯೋಗದ ಬದುಕಾಗುತ್ತದೆ. ಎಂದು ತಿಳಿಸಿದರು.

ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೂಪ ಚಿಪ್ಲೂಂಕರ್ ಪ್ರಾರ್ಥನೆ ಯೊಂದಿಗೆ, ಮಾಲತಿ ವಸಂತ್ ರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.ಸುಲೋಚನ ಬಿ.ವಿ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here