ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಬೆಂಗಳೂರು ಇದರ ವತಿಯಿಂದ ಶ್ರೀ ನಾರಾಯಣ ಗುರು ತತ್ವ ಪೂಜೆ ಹಾಗೂ ದಶಮಾನೋತ್ಸವ ಕ್ರೀಡಾ ಜ್ಯೋತಿಯಾತ್ರೆಯ ಪೂರ್ವ ತಯಾರಿ ಶಿಬಿರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ತಾಲೂಕು ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು, ಕಾರ್ಕಳ ತಾಲೂಕು(BSNDP) ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಇವರನ್ನು ಮಹಿಳಾ (BSNDP) ರಾಜ್ಯಾಧ್ಯಕ್ಷರಾದ ಪುಷ್ಪಲತಾ ಚಂದ್ರು ಮೇಡಂ ಹಾಗೂ ರಾಜ್ಯಾಧ್ಯಕ್ಷರಾದ ಸೈದಪ್ಪ ಗುತ್ತೇದಾರ್ ಹಾಗೂ ಉಡುಪಿ ಜಿಲ್ಲಾ (BSNDP) ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ ರವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಕಾರ್ಕಳ ತಾಲೂಕು ಪೆರ್ವಾಜೆ ರಾಜು ರವರ ಧರ್ಮಪತ್ನಿ ಯಾಗಿದ್ದು. ಮಾಜಿ ಪುರಸಭಾ ಸದಸ್ಯಯುವವಾಹಿನಿ (ರಿ) ಕಾರ್ಕಳ ಘಟಕದ ಅದ್ಯಕ್ಷ ಯಾಗಿ ಪ್ರಸ್ತುತ ನಿಕಟಪೂರ್ವ ಅಧ್ಯಕ್ಷ ರಾಗಿ, ಯುವವಾಹಿನಿ (ರಿ) ಮಂಗಳೂರು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ, ಹಾಗೂ ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ (ರಿ) ಪತ್ತೊಂಜಿಕಟ್ಟೆ ಪೆರ್ವಾಜೆ ಇದರ ಸ್ಥಾಪಕ ಅಧ್ಯಕ್ಷ ರಾಗಿದ್ದು, seniour chember ಇಂಟರ್ನ್ಯಾಷನಲ್ ರಾಕ್ ಸಿಟಿ ಕಾರ್ಕಳದ ಸದಸ್ಯರಾಗಿರುತ್ತಾರೆ.

