ಕಾರ್ಕಳ : ಬಾಂಗ್ಲಾದೇಶದಲ್ಲಿ ನಡೆದ 2ನೇ ಮಹಿಳಾ ಕಬ್ಬಡಿ ವಿಶ್ವಕಪ್- ಪಂದ್ಯಾಟದಲ್ಲಿ ಚಾಂಪಿಯನ್ ಆದ ಭಾರತ ತಂಡವನ್ನು ಪ್ರತಿನಿಧಿಸಿ ವಿಜಯಗಳಿಸಿದ ಮೂಲತಃ ಕಾರ್ಕಳ ಮಿಯ್ಯಾರು ಗ್ರಾಮದವರಾದ, ಪ್ರಸ್ತುತ ಸುರತ್ಕಲ್ ಗುಡ್ಡೆಕೊಪ್ಪದ ನಿವಾಸಿ ಧನಲಕ್ಷ್ಮೀ ಅವರನ್ನು ವಿಕಾಸ ಜನಸೇವಾ ಕಛೇರಿಯಲ್ಲಿ ಬಿಜೆಪಿ ಪ್ರಮುಖರೊಂದಿಗೆ ಶಾಸಕ ವಿ. ಸುನಿಲ್ ಕುಮಾರ್ ಅವರು ಸನ್ಮಾನಿಸಿದರು. ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಗಳ ಪುತ್ರಿ ಧನಲಕ್ಷ್ಮೀ ಅವರನ್ನು ಶಾಸಕ ವಿ. ಸುನಿಲ್ ಕುಮಾರ್ ರವರು ಅಭಿನಂದಿಸಿ, ಮುಂದೆ ಇನ್ನಷ್ಟು ಸಾಧನೆ ಮಾಡುವ ಮೂಲಕ ಕಾರ್ಕಳಕ್ಕೆ ನಮ್ಮ ರಾಜ್ಯಕ್ಕೆ- ದೇಶಕ್ಕೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂಧರ್ಭದಲ್ಲಿ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕರಾದ ಗಣನಾಥ್ ಶೆಟ್ಟಿ, ಅಶ್ವಥ್ ಎಸ್ ಎಲ್, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಪ್ರಧಾನ ಕಾರ್ಯದರ್ಶಿ ಸತೀಶ್ ಬೋಳ, ಬಿಜೆಪಿ ಹಿರಿಯರಾದ ರವೀಂದ್ರ ಮಡಿವಾಳ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಮುಖರು ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

