ಕಾರ್ಕಳ ಸ.ಪ.ಪೂ. ಕಾಲೇಜು; ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮ

0
157

ಕಾರ್ಕಳ : ಸರಕಾರಿ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿಯ ಪ್ರೌಢಶಾಲಾ ಹಳೆ ವಿದ್ಯಾರ್ಥಿ CA ಕಮಲಾಕ್ಷ ಕಾಮತ್ ರವರು ತನ್ನ ತಂದೆ ತಾಯಿಯವರ ಸವಿ ನೆನಪಿನಲ್ಲಿ ನೂತನವಾಗಿ ನಿರ್ಮಿಸಿಕೊಟ್ಟ ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 04/09/2025ರ ಗುರುವಾರದಂದು ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ನಿವೃತ್ತ ಇಸ್ರೋ ವಿಜ್ಞಾನಿ ಇಡ್ಯಾ ಜನಾರ್ಧನ್ ವಹಿಸಿದ್ದರು. ದಾನಿಗಳಾದ ಕಮಲಾಕ್ಷ ಕಾಮತ್ ಹಾಗೂ ಕಟ್ಟಡದ ಇಂಜಿನಿಯರ್ ಪ್ರಸಾದ್ ಬೆಳ್ಳಿರಾಯರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಮಲಾಕ್ಷ ಕಾಮತ್ ರವರು ತಂದೆ ತಾಯಿ ತಮ್ಮ ಬದುಕಿಗೆ ನೀಡಿದ ಆದರ್ಶಗಳನ್ನು ಸ್ಮರಿಸಿ ಅದನ್ನು ವಿದ್ಯಾರ್ಥಿಗಳಿಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪದವಿ ಪೂರ್ವ ಇದರ ಉಪನಿರ್ದೇಶಕರಾದ ಮಾರುತಿ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ, ಗಿರಿಜಮ್ಮ, ಸಿ ಬಿ ಸಿ ಕೋಶಾಧಿಕಾರಿ ನಿತ್ಯಾನಂದ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕಾ ಅಡ್ಯಂತಾಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ, ಸಿಬಿಸಿ ಸದಸ್ಯರಾದ ನಾಗೇಶ ದೇವಾಡಿಗ ಉಪಸ್ಥಿತರಿದ್ದರು.
ಶಾಂತಿ ವಿಟಲ್ ಟ್ರಸ್ಟ್ ವತಿಯಿಂದ ಕೊಡ ಮಾಡಲಾದ ವಿದ್ಯಾರ್ಥಿ ವೇತನವನ್ನು ಆಯ್ದ ಅರ್ಹ ಎಂಟು ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂಪಾಯಿಯಂತೆ ನೀಡಲಾಯಿತು, ಫಲಾನುಭವಿಗಳ ಪಟ್ಟಿಯನ್ನು ಕನ್ನಡ ಉಪನ್ಯಾಸಕರಾದ ಜ್ಯೋತಿ ವಾಚಿಸಿದರು. ಪ್ರಾಂಶುಪಾಲರಾದ ಅನ್ನಪೂರ್ಣ ಕಾಮತ್ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯಸ್ಥರಾದ ಮಲ್ಲಿಕಾ ವಂದಿಸಿದರು ಭೌತಶಾಸ್ತ್ರ ಉಪನ್ಯಾಸಕರಾದ ಸದಾನಂದ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here