ಕಾರ್ಕಳ: ದಾವಣಗೆರೆ ಸಾಗುತ್ತಿದ್ದ ಶ್ರೀ ದುರ್ಗಾಂಬಾ ಬಸ್‌ ಪಲ್ಟಿ

0
198

ಕಾರ್ಕಳ: ಮಂಗಳೂರಿನಿಂದ ಕಾರ್ಕಳ ಆಗಿ ದಾವಣಗೆರೆ ಸಾಗುತ್ತಿದ್ದ ಶ್ರೀ ದುರ್ಗಾಂಬಾ ಬಸ್‌ ಬುಧವಾರ ರಾತ್ರಿ ಜೋಡುಕಟ್ಟೆಯಲ್ಲಿ ಪಲ್ಟಿಯಾಗಿದೆ.

ಬಸ್‌ನಲ್ಲಿ ಒಟ್ಟು 9 ಮಂದಿ ಪ್ರಯಾಣಿಕರಿದ್ದು ನಾಲ್ವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಇಬ್ಬರು ಚಾಲಕರಿದ್ದು ಓರ್ವ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಅಪಘಾತದಿಂದಾಗಿ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಡೈವರ್ಸನ್ ಬೋರ್ಡ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

LEAVE A REPLY

Please enter your comment!
Please enter your name here