ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ 66,000 ರೂ.ಗಳು

0
418


ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ನೇಮಕಾತಿ ಅಧಿಸೂಚನೆಯೊಂದನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕಟಣೆ ಗುತ್ತಿಗೆ ಆಧಾರದ್ದಾಗಿದ್ದು, ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಹುದ್ದೆಯ ಜೊತೆ ಹೇಳಿರುವ ಮಾನದಂಡಗಳನ್ನು ಅನ್ವಯಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆ, ಮಾಸಿಕ ಸಂಭಾವನೆ ವಿದ್ಯಾರ್ಹತೆ, ಅನುಭವ ಸೇವೆಗೆ ಪಡೆಯುವ ಅವಧಿ ವಿವರಗಳು ಇಲ್ಲಿವೆ.

ಯಾವ-ಯಾವ ಹುದ್ದೆಗಳು: ಸಮಾಲೋಚಕರು (ದಾಖಲೀಕರಣ) (1). ಮಾಸಿಕ ಸಂಭಾವನೆ 66,000 (ಆದಾಯ ತೆರಿಗೆಗಳನ್ನೊಳಗೊಂಡಂತೆ). Master’s Degree- Mass Communication/ Journalism or Rural Development with experience in report writing and analysis. ಕನಿಷ್ಠ ಅನುಭವ 5 ವರ್ಷಗಳು ಸೇವೆ ಪಡೆಯುವ ಅವಧಿ 4 ತಿಂಗಳು.

ಸಮಾಲೋಚಕರ ಜವಾಬ್ದಾರಿಗಳು. ಸಮಾಲೋಚಕರು(ದಾಖಲೀಕರಣ). ಆಯುಕ್ತಾಲಯದಲ್ಲಿ ನಿರ್ವಹಿಸುವ ಕಾರ್ಯಕ್ರಮಗಳನ್ನು ದಾಖಲಿಸಿ ಸರ್ಕಾರ ಹಾಗೂ ಸಭೆಗಳಿಗೆ ವರದಿ ತಯಾರಿಸುವುದು ಹಾಗೂ ಅನುಷ್ಠಾನದ ಕುರಿತು ವಿಶ್ಲೇಷಣಾತ್ಮಕ ವರದಿಗಳು ಅಗತ್ಯಾನುಸಾರ ಸಿದ್ಧಪಡಿಸುವುದು ಮತ್ತು ಅಗತ್ಯಾನುಸಾರ ಆಂಗ್ಲ ಅಥವಾ ಕನ್ನಡ ಭಾಷೆಗಳಲ್ಲಿ ವರದಿ ತಯಾರಿಸುವುದು.

ಸಮಾಲೋಚಕರು (ಘನ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ) 1 ಹುದ್ದೆ. ರೂ. 66,000 (ಆದಾಯ ತೆರಿಗೆಗಳನ್ನೊಳಗೊಂಡಂತೆ). (Master’s Degree – Social Science or B.E Civil/ Environmental Engineering) ವಿಷಯಾಧಾರಿತ ಜ್ಞಾನ ಹೊಂದಿರಬೇಕು. ಕನಿಷ್ಠ 10 ವರ್ಷಗಳ ಅನುಭವ. ಸೇವೆ ಪಡೆಯುವ ಅವಧಿ 4 ತಿಂಗಳು.

ಜವಾಬ್ದಾರಿಗಳು. ವಿಷಯಾಧಾರಿತ ಜ್ಞಾನ ಹೊಂದಿರಬೇಕು. ಕ್ಷೇತ್ರಮಟ್ಟದಲ್ಲಿ ಈ ಕುರಿತು ಇರುವ ಹಾಲಿ ಪರಿಸ್ಥಿತಿ ಸುಧಾರಣಾ ಕ್ರಮಗಳು, ಜನ ಸ್ನೇಹಿ/ ಬಳಕೆ ಸ್ನೇಹಿ ವಿಧಾನಗಳನ್ನು ಕ್ಷೇತ್ರಮಟ್ಟದ ಅಧಿಕಾರಿಗಳಿಗೆ/ ನೌಕರರಿಗೆ, ಜನಪ್ರತಿನಿಧಿಗಳಿಗೆ, ಸ್ವ ಸಹಾಯ ಸಂಘಗಳಿಗೆ ಮನದಟ್ಟಾಗುವಂತೆ ವಿಷಯವನ್ನು ತಿಳಿಸುವ ಕುರಿತ ಜವಾಬ್ದಾರಿ. ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಹಂತದವರೆಗೂ ಘನ ತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ವರದಿ ತಯಾರಿಸುವುದು ಮತ್ತು ಅಗತ್ಯಾನುಸಾರ ಆಂಗ್ಲ ಅಥವಾ ಕನ್ನಡ ಭಾಷೆಗಳಲ್ಲಿ ವರದಿ ತಯಾರಿಸುವುದು.

ಸಮಾಲೋಚಕರು (ಯೋಜನೆ ಮತ್ತು ಕಾರ್ಯಕ್ರಮಗಳು) 1 ಹುದ್ದೆ. Master’s Degree in any discipline with Minimum 10 years experience in RD schemes. ರೂ. 66,000 (ಆದಾಯ ತೆರಿಗೆಗಳನ್ನೊಳಗೊಂಡಂತೆ). ಕನಿಷ್ಠ ಅನುಭವ 10 ವರ್ಷಗಳು. ಸೇವಾವಧಿ 4 ತಿಂಗಳು. ಜವಾಬ್ದಾರಿ. ಆಯುಕ್ತಾಲಯದಲ್ಲಿ ನಿರ್ವಹಣೆಯಾಗುವ ಯೋಜನೆ/ ಕಾರ್ಯಕ್ರಮಗಳ ಕುರಿತ ಮಾಹಿತಿ ಸಂಗ್ರಹಣೆ, ಪ್ರಗತಿ ವರದಿ ಸಿದ್ಧಪಡಿಸುವುದು ಮತ್ತು ಅಗತ್ಯಾನುಸಾರ ಆಂಗ್ಲ ಅಥವಾ ಕನ್ನಡ ಭಾಷೆಗಳಲ್ಲಿ ವರದಿ ತಯಾರಿಸುವುದು.

ಡಾಟಾ ವಿಶ್ಲೇಷಕರು (Data Analytics Expert) 1 ಹುದ್ದೆ. ರೂ. 50,00 (ಆದಾಯ ತೆರಿಗೆಗಳನ್ನೊಳಗೊಂಡಂತೆ). ಕನಿಷ್ಠ 10 ವರ್ಷಗಳು. ಸೇವಾವಧಿ 4 ತಿಂಗಳು. M.Sc Statistics/ Mathematics along with relevant Software knowledge and presentation skills.

ಜವಾಬ್ದಾರಿಗಳು., ಕಾರ್ಯಕ್ರಮಗಳು – ಆಯುಕ್ತಾಲಯದಲ್ಲಿ ನಿರ್ವಹಣೆಯಾಗುವ ಯೋಜನೆಗಳ ಅನುಷ್ಠಾನ ಸಂಬಂಧ ಭೌತಿಕ ಮತ್ತು ಆರ್ಥಿಕ ಪ್ರಗತಿ ವರದಿ ಸಿದ್ಧಪಡಿಸುವುದು, ಆಯವ್ಯಯ ತಯಾರಿಕೆಯಲ್ಲಿ ಸಹಕಾರ ನೀಡುವುದು, ವಿಶ್ಲೇಷಣೆ ಮಾಡುವುದು, ಪ್ರಸ್ತುತಿ ಮಾಡುವುದು ಇತ್ಯಾದಿ ಜವಾಬ್ದಾರಿಗಳು. ಇಲಾಖೆಯ E- Governance ತಂಡದೊಂದಿಗೆ ಸಮನ್ವಯ ಮಾಡುವುದು ಮತ್ತು ಅಗತ್ಯಾನುಸಾರ ಆಂಗ್ಲ ಅಥವಾ ಕನ್ನಡ ಭಾಷೆಗಳಲ್ಲಿ ವರದಿ ತಯಾರಿಸುವುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಕಾಳಿದಾಸ ಮಾರ್ಗ, ಕೆ.ಜಿ. ರೋಡ್ ಜಂಕ್ಷನ್, ಗಾಂಧಿ ನಗರ, ಬೆಂಗಳೂರು-560009 ಸಂಪರ್ಕಿಸಿ.

LEAVE A REPLY

Please enter your comment!
Please enter your name here