ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, ಕಾಸರಗೋಡು ಕರ್ನಾಟಕ ಮಕ್ಕಳ ಕವಿಗೋಷ್ಟಿ- ಮಕ್ಕಳ ಸಾಂಸ್ಕೃತಿಕ ಉತ್ಸವ

0
7


ಕಾಸರಗೋಡು: ಮಕ್ಕಳ ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಮಕ್ಕಳ ಸಾಹಿತಿಗಳು,ಕವಿ, ಕವಯತ್ರಿಯರು, ಬರಹಗಾರರು, ಸಾಹಿತಿಗಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಇದರ ಕೇರಳ ರಾಜ್ಯ ಘಟಕವಾಗಿ 2019 ರಲ್ಲಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕವು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿ ಮತ್ತು ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡಿರುತ್ತದೆ. ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾಧ್ಯಕ್ಷ ಸಂಜೀವ ದುಮಕನಾಳ ಹೇಳಿದರು.


ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ ಸಹಯೋಗದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ಕಾಸರಗೋಡು ಮೀಪುಗುರಿ ಪಾರೆಕಟ್ಟೆಯ ಕನ್ನಡ ಗ್ರಾಮ( ಕಾಸರಗೋಡು ಗೋ – ಕುಟೀರ)ದಲ್ಲಿ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, ಕಾಸರಗೋಡು- ಕರ್ನಾಟಕ ಮಕ್ಕಳ ಕವಿಗೋಷ್ಠಿ-ಮಕ್ಕಳ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿದರು.
ಕ ರಾ ಮ ಸಾ ಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ನ್ಯಾಯವಾದಿ ಪರಿಮಳಾರಾವ್ ಕೆ.,ಕವಿ ಹರೀಶ ಸುಲಾಯ ಒಡ್ಡoಬೆಟ್ಟು ,ವೆಂಕಟ್ ಭಟ್ ಎಡನೀರು ಮುಖ್ಯ ಅತಿಥಿಯಾಗಿದ್ದರು. ಕವಿ, ಪತ್ರಕರ್ತ ಕನ್ನಡ ರಾಯಭಾರಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಧಿಕ್ಸೂಚಿ ಭಾಷಣ ನೀಡಿದ್ದರು. ಪತ್ರಕರ್ತ,ಕವಿ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ ಕೂಡ್ಲು ಸ್ವಾಗತಿಸಿದರು. ದಿವಾಕರ ಪಿ.ಅಶೋಕನಗರ ಧನ್ಯವಾದ ವಿತ್ತರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕ,ಕರ್ನಾಟಕ ಸಂಗ್ರಾಮ ಸೇನೆ,ಧಾರವಾಡ ಇದರ 20 ಮಂದಿ ಯುವ -ವಿದ್ಯಾರ್ಥಿಗಳಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾಸರಗೋಡು ದಕ್ಷಿಣ ಕನ್ನಡ ಧಾರವಾಡ ಜಿಲ್ಲೆಯ ಮಕ್ಕಳಿಂದ ಮಕ್ಕಳ ಕವನ ವಾಚನ ನಡೆಯಿತು. ಡಾ.ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ 30 ಮಂದಿ ವಿದ್ಯಾರ್ಥಿ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು. ದಿವಾಕರ ಪಿ. ಅಶೋಕ ನಗರ ಕಾಸರಗೋಡು ಇವರಿಂದ ಭಾವ ಜಾನಪದ, ಗೀತಾ ಗಾಯನ ನಡೆಯಿತು.
ಕವಿಗಳು,ಕಲಾವಿದರಿಗೆ ಗೌರವ ಪತ್ರ ನೀಡಿ ಅಭಿನಂದಿಸಲಾಯಿತು.ನಂತರ ಎಲ್ಲರೂ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ- ಕುಟೀರಕ್ಕೆ ಸಂದರ್ಶಿಸಿದರು.
ಧಾರವಾಡದ ಸಾಂಸ್ಕೃತಿಕ ಕಲಾತಂಡದ 20 ಸದಸ್ಯರು, ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನವಾದ ಕೆ. ಯಶೋಧ- ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ವಿಶ್ರಾಂತಿ ಗೃಹದಲ್ಲಿ ವಾಸ್ತವ್ಯ ಹೂಡಿದರು.

LEAVE A REPLY

Please enter your comment!
Please enter your name here