ಬಿಲ್ಲವ ಸೇವಾ ಸಂಘ(ರಿ ) ಕರಂದಕ್ಕಾಡ್, ಕಾಸರಗೋಡು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ 20 ನೇ ಪ್ರತಿಷ್ಟಾ ವಾರ್ಷಿಕೋತ್ಸವವು ಬಹಳ ವಿಜೃಂಭನೆಯಿಂದ ಜರಗಿತು. ಬೆಳಗ್ಗೆ ಗಣಹೋಮದೊಂದಿಗೆ ಆರಂಭವಾದ ಕಾರ್ಯಕ್ರಮ ನಂತರ ಸತ್ಯನಾರಾಯಣ ಪೂಜೆ, ಗುರುಪೂಜೆ ಹಾಗೂ ಕುತ್ಯಾಳ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಭಜನಾ ವೃಂದ, ಮತ್ತು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಸಣ್ಣ ಕೂಡ್ಲು ಇವರಿಂದ ಭಜನೆ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಪ್ರಸಾದ ವಿತರಣೆ ನಡೆಯಿತು. ಸಾಯಂಕಾಲ 6 ಘಂಟೆಗೆ ಸಭಾ ಕಾರ್ಯಕ್ರಮ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಘು ಮೀಪುಗುರಿ ಇವರು ವಹಿಸಿದ್ದರು, ಕಾರ್ಯಕ್ರಮವನ್ನು ಪುತ್ತೂರಿನ ಅಕ್ಷಯ ಗ್ರೂಪ್ ಓಫ್ ಎಜುಕೇಷನಲ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷರಾದ ಜಯಂತ ನಡುಬೈಲ್ ಇವರು ದೀಪ ಪ್ರಜ್ವಲನೆ ಗೆಯ್ಯುವ ಮೂಲಕ ಉದ್ಘಾಟಿಸುತ್ತಾ ಸಮಾಜದ ಯುವ ಪೀಳಿಗೆ ಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಸಿದ್ಧಾಂತ ಗಳನ್ನು ಮೈ ಗೂಡಿಸಿ ಬೆಳೆಯಬೇಕು, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಆ ನಿಟ್ಟಿನಲ್ಲಿ ಸಮಾಜ ಮುಂದುವರಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಕೋಶಧಿಕಾರಿ ಜನಾರ್ಧನ ಪೂಜಾರಿ, ಕುಂಜತೂರಿನ ನಿವೃತ ಹೈಸ್ಕೂಲ್ ಅಧ್ಯಪಕರಾದ ಕೃಷ್ಣಪ್ಪ ಪೂಜಾರಿ ಇವರು ಮುಖ್ಯ ಅತಿಥಿಗಳಾಗಿದ್ದರು. ಶೀನಪ್ಪ ಪೂಜಾರಿ ಅಲಾರ್, ಕಾಳ್ಯಾನ್ಗಾಡ್ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೆಸರರಾದ ಅಚ್ಚುತ, ಬಿಲ್ಲವ ಸೇವಾ ಸಂಘದ ಗೌರವಧ್ಯಕ್ಷ ಎ ಕೇಶವ ಇವರು ಶುಭಾಶಯಗಳನ್ನು ಅರ್ಪಿಸಿದರು. ಉದ್ಯಮಿ ಹರೀಶ್ ಕುಮಾರ್, ಟೌನ್ ಜಿ ಯು ಪಿ ಶಾಲಾ ಮುಕ್ಯೋಪಾಧ್ಯಯಿನಿ ಭಾರತಿ, ಅಡ್ಕತ್ತ್ಬೈಲ್ ಶಾಲಾ ಮುಕ್ಯೋಪಾಧ್ಯಯಿನಿ ಸೀಮಾ, ಹೊಸಥಾಗಿ ಚುನಾಯಿತಾರಾದ ಕಾಸರಗೋಡು ನಗರ ಸಭಾ ಸದಸ್ಯರಾದ ರವೀಂದ್ರ ಕರಂದಕ್ಕಾಡ್, ಹರೀಶ್ ಕೆ ಆರ್, ಕೊರಕ್ಕೋಡು ಶ್ರೀ ದೂಮಾವತಿ ದೈವಸ್ಥಾನದ ಪ್ರದಾನ ಕರ್ಮಿ ವಸಂತ ಪೂಜಾರಿ ಇವರನ್ನು ಗೌರವಿಸಲಾಯಿತು. ಸಂಘದ ಸಮಿತಿ ಸದಸ್ಯರಾದ ಸುಕಿರ್ತಿ ವರ್ಮಾ, ಅಶೋಕ್ ಬೀರಂತಬೈಲ್, ಕಮಲಾಕ್ಷ ಸೂರ್ಲು,ಸಂತೋಷ್, ಮೈಂದಪ್ಪ ಪೂಜಾರಿ, ಸತೀಶ್ ಗುಡ್ಡೆಮನೆ, ಮಹೇಶ್, ಚಂದ್ರಕಲಾ, ರೋಹಿಣಿ, ದೀಪ್ತಿ, ರವಿ ಪೂಜಾರಿ ಇವರು ಸಹಕರಿಸಿದರು. ಪ್ರೆಮಜಿತ್ ನಿರ್ವಹಿಸಿ, ಜ್ಞಾನ ಲತಾ ನಿರೂಪಿಸಿದರು. ಸಂಘದ ಪ್ರದಾನ ಕಾರ್ಯದರ್ಶಿ ಹರಿಕಾಂತ ಕಾಸರಗೋಡು ಸ್ವಾಗತಿಸಿ ಕೋಶಧಿಕಾರಿ ಶಮ್ಮಿಕುಮಾರ್ ಧನ್ಯವಾದ ಗೈದರು. ನಂತರ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.


