ಕಾಸರಗೋಡು: ನಗರದ ಹೃದಯ ಭಾಗದಲ್ಲಿರುವ ಸುಮಾರು 15 ವರ್ಷಗಳಿಂದ ನೆಲೆಸಿರುವ Pixel digital press ಕೋಟೆಕಣಿ ರಸ್ತೆ ಕಾಸರಗೋಡು. ಈ ಬಾರಿ 79 ನೇ ಸ್ವಾತಂತ್ರ್ಯೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಸದಸ್ಯೆಯಾದ ಶ್ರೀಮತಿ ವಾಣಿ ಹರಿಪ್ರಸಾದ್ ರವರು ಧ್ವಜಾರೋಹಣಗೈದರು.
ರಂಗನಟ ಉದಯಕುಮಾರ್ ಮನ್ನಿಪಾಡಿ ಅವರು ಸ್ವಾತಂತ್ರ್ಯದ ಕುರಿತು ಮಾತನಾಡಿದರು. ಸಂಸ್ಥೆಯ ಸದಸ್ಯರಾದ ಮನೀಶ್ ಕೂಡ್ಲು, ಕಿರಣ್ ಶೆಟ್ಟಿ, ವಿದ್ಯಾಧರ ಕಾಸರಗೋಡು, ಅಜಯ್ ಕೂಡ್ಲು, ಪುಷ್ಪ, ಮಮತಾ ಶಂಕರ್, ಮಾಲಾಶ್ರೀ ಪ್ರಮೋದ್ ಮುಂತಾದವರು ಮಾತನಾಡಿದರು. ನವೀನ್ ರವರು ಸ್ವಾಗತಿಸಿ , ವಿದ್ಯಾ ಧನ್ಯವಾದವಿತರು. ಸಂಸ್ಥೆಯ ಸದಸ್ಯರೆಲ್ಲರೂ ರಾಷ್ಟ್ರಗೀತೆಯ ಹಾಡಿದರು. ಬಳಿಕ ಸಿಹಿ ತಿಂಡಿ ವಿತರಿಸಿದರು. ಅಜಿತ್, ಶೇಖರ್, ಜಿತಾ ವಿಷ್ಣು, ವಿಜು ಮುಂತಾದವರು ಉಪಸ್ಥಿತರಿದ್ದರು.