ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ ಸರಕಾರದ ಮಲಯಾಳಂ ಭಾಷಾ ಬಿಲ್ಸ್- 2025 ತಿದ್ದುಪಡಿಗೆ ಆಗ್ರಹಿಸಿ, ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಗಣ್ಯರ ಸಭೆ ಯಶಸ್ವಿ

0
20

ಕೇರಳ ಸರಕಾರವು (Malayalam Bhasha Bills -2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಾ ಅಲ್ಪ ಸಂಖ್ಯಾತರನ್ನು ಹೊರತುಪಡಿಸಲು ಆಗ್ರಹಿಸಿ, ಮುಂದಿನ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಚುನಾಯಿತರಾದ ನೂತನ ಮುಖ್ಯಮಂತ್ರಿಗಳು,ಸಚಿವರು, ಶಾಸಕರು ಒಮ್ಮತದಿಂದ ಈ ಮಸೂದೆಯನ್ನು ಮರು ಪರಿಶೀಲಿಸಿ ಸೂಕ್ತ ತಿದ್ದುಪಡಿ ಯೊಂದಿಗೆ ಪುನ: ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕಾಸರಗೋಡು ಪ್ರದೇಶದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಮಾಧ್ಯಮದವರು ಒಗ್ಗೂಡಿ, “ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು” ಮೂಲಕ ಮನವಿಯನ್ನು ಸಿದ್ಧಪಡಿಸಿ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.

ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಮಾರ್ಚ್ 28 ರಂದು ನಡೆದ ಪ್ರಥಮ ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಗಣ್ಯರ ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ವಹಿಸಿದ್ದರು.

ಈ ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆ ತ್ಹೋಡಿ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯ್ಯ ಕಟ್ಟೆ,ಡಾ.ಕೆ.ಎನ್ ವೆಂಕಟ್ರಮಣ ಹೊಳ್ಳ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು,ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್ ಎ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲೆ,ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜಿವ ದುಮಕನಾಳ, ಧಾರವಾಡ ಜಯಾನಂದ ಕುಮಾರ್ ಹೊಸದುರ್ಗ,ವೆಂಕಟ್ ಭಟ್ ಎಡನೀರು,ಕರ್ನಾಟಕ ಸಮಿತಿ ಕಾರ್ಯದರ್ಶಿ, ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ, ಹರೀಶ್ ಸುಲಾಯ ಒಡ್ಡoಬೆಟ್ಟು ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಟಿ.ಶಂಕರ ನಾರಾಯಣ ಭಟ್, ಪತ್ರಕರ್ತ ವಿ.ರಾಜ್ ಆಡೂರು, ಪುರುಷೋತ್ತಮ ಪೆರ್ಲ, ಪುರುಷೋತ್ತಮ ಭಟ್ ಕಾಸರಗೋಡು ಪ್ರದೀಪ್ ಬೇಕಲ್, ಮಾಜಿ ಕೌನ್ಸಿಲರ್ ಕೆ.ವರಪ್ರಸಾದ್ ಕೋಟೆಕಣೆ,ಕೆ. ಗುರುಪ್ರಸಾದ್ ಕೋಟೆಕಣಿ,ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಗಡಿನಾಡ ಕಲಾವಿದರು ಸಂಸ್ಥೆಯ ಉಪಾಧ್ಯಕ್ಷ ದಿವಾಕರ ಪಿ. ಅಶೋಕನಗರ ನ್ಯಾಯವಾದಿ ಪರಿಮಳ ರಾವ್ ಕೆ. ಮಂಗಳೂರು ಡಾ.ವಾಣಿಶ್ರೀ ಕಾಸರಗೋಡು ಶ್ರೀಕಾಂತ ಕಾಸರಗೋಡು ಸಲಹೆ,ನೂತನ ಮಾರ್ಗದರ್ಶನಗಳನ್ನು ನೀಡಿದರು. ಮಾಜಿ ಕೌನ್ಸಿಲರ್ ಶಂಕರ ಕೆ ಸ್ವಾಗತಿಸಿದರು.

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ದಿವ್ಯಾಗಟ್ಟಿ ಪರಕ್ಕಿಲ ಸಮನ್ವಯಕಾರಕರಾಗಿ ಸಹಕರಿಸಿದರು. ಈ ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಗಣ್ಯರ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

LEAVE A REPLY

Please enter your comment!
Please enter your name here