ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾ.28ರಂದು ಮಲಯಾಳಂ ಭಾಷಾ ಬಿಲ್ಸ್ – 2025 ತಿದ್ದುಪಡಿಗೆ ಆಗ್ರಹಿಸಿ ಕಾಸರಗೋಡು ಕನ್ನಡಿಗರ ದುಂಡುಮೇಜಿನ ಪರಿಷತ್ತು

0
13

ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾರ್ಚ್ 28ರಂದು ಮಲಯಾಳಂ ಭಾಷಾ ಬಿಲ್ಸ್- 2025 ತಿದ್ದುಪಡಿಗೆ ಆಗ್ರಹಿಸಿ ಕಾಸರಗೋಡು ಕನ್ನಡಿಗರ ದುಂಡುಮೇಜಿನ ಪರಿಷತ್ತು
ಕೇರಳ ಸರಕಾರವು (Malayalam Bhasha Bills- 2025) ಮಲಯಾಳ ಬಾಷಾ ಮಸೂದೆಯಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ಹೊರತುಪಡಿಸಲು ಆಗ್ರಹಿಸಿ, ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾದ ನೂತನ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಒಮ್ಮತದಿಂದ ಈ ಮಸೂದೆಯನ್ನು ಮರುಪರಿಶೀಲಿಸಿ ಸೂಕ್ತ ತಿದ್ದುಪಡಿ ಯೊಂದಿಗೆ ಪುನಃ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕಾಸರಗೋಡು ಪ್ರದೇಶದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಒಗ್ಗೂಡಿ ದುಂಡುಮೇಜಿನ ಪರಿಷತ್ತು ಮೂಲಕ ಮನವಿಯನ್ನು ಸಿದ್ಧಪಡಿಸಿ ಸಹಿ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ವಿದ್ವತ್ ಗೋಷ್ಠಿಯನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಮಾರ್ಚ್ 28 ಶನಿವಾರದಂದು ಅಪರಾಹ್ನ ಗಂಟೆ 3ಕ್ಕೆ ಏರ್ಪಡಿಸಲಾಗಿದೆ.

ಪ್ರಸ್ತಾವನೆ : ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು, ಸಮನ್ವಯಕಾರರು : ದಿವ್ಯಾ ಗಟ್ಟಿ ಪರಕ್ಕಿಲ, ಸಿವಿಲ್ ಇಂಜಿನಿಯರ್, ಕವಯತ್ರಿ, ಸಂಘಟಕಿ, ಕಾಸರಗೋಡು.

ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು : ಕೆ. ಮರಳೀಧರ ಬಳ್ಳಕ್ಕುರಾಯ, ನ್ಯಾಯವಾದಿಗಳು, ಅಧ್ಯಕ್ಷರು, ಕರ್ನಾಟಕ ಸಮಿತಿ (ರಿ.), ಕಾಸರಗೋಡು ಎ. ಆರ್. ಸುಬ್ಬಯಕಟ್ಟೆ, ಸದಸ್ಯರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ
ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು, ಧಾರ್ಮಿಕ ಮುಂದಾಳು, ಸುಕೇಶ್ ಎ., ಅಧ್ಯಕ್ಷರು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕಾಸರಗೋಡು
ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಾಸರಗೋಡು, ಸಂಜೀವ ದುಮಕನಾಳ ಧಾರವಾಡ, ಕೆ. ಗುರುಪ್ರಸಾದ ಕೋಟೆಕಣಿ, ಕಾಸರಗೋಡು ಡಿ. ಜಯನಾರಾಯಣ ತಾಯನ್ನೂರು, ಕಾಸರಗೋಡು, ಜಯಾನಂದ ಕುಮಾರ್ ಹೊಸದುರ್ಗ, ಕಾಸರಗೋಡು, ಕೆ. ಸತ್ಯನಾರಾಯಣ ತಂತ್ರಿ, ನ್ಯಾಯವಾದಿ, ಕಾಸರಗೋಡು ಟಿ. ಶಂಕರನಾರಾಯಣ ಭಟ್, ಅಧ್ಯಕ್ಷರು, ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡ ಘಟಕ, ಆಯಿಷಾ ಎ. ಎ. ಪೆರ್ಲ, ಸಾಮಾಜಿಕ ಕಾರ್ಯಕರ್ತೆ, ಗಿರೀಶ್ ಪಿ. ಎಂ. ಚಿತ್ತಾರಿ, ಪತ್ರಕರ್ತರು ಮಂಗಳೂರು,ಜೆ. ಡಿ. ಕಯ್ಯಾರ್, ಪ್ರಧಾನ ಸಂಪಾದಕರು, ಪೊಸಡಿಗುಂಪೆ ಮಾಸಪತ್ರಿಕೆ, ಕಾಸರಗೋಡು, ಪುರುಷೋತ್ತಮ ಭಟ್ ಕೆ., ಸಂಪಾದಕರು, ಸಮರಸ ಸುದ್ದಿ, ಕಾಸರಗೋಡು, ಜಯ ಮಣಿಯಂಪಾರೆ, ಪತ್ರಕರ್ತರು ಕಾಸರಗೋಡು, ವೀಜಿ ಕಾಸರಗೋಡು, ಪತ್ರಕರ್ತರು ಕಾಸರಗೋಡು, ಪುರುಷೋತ್ತಮ ಎಂ. ನಾಯ್ಕ್, ನಿರ್ದೇಶಕರು, ಕೆ. ಸಿ. ಎನ್. ಚಾನೆಲ್, ಕಾಸರಗೋಡು ಪ್ರದೀಪ್ ಬೇಕಲ್, ಪತ್ರಕರ್ತರು ಕಾಸರಗೋಡು, ಕೆ. ವರಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್, ಕಾಸರಗೋಡು ನಗರಸಭೆ, ಕೆ. ನಿರಂಜನ ಕೊರಕ್ಕೋಡು , ಸಾರಿಗೆ ಉದ್ಯಮಿ, ಕಾಸರಗೋಡು
ವಿಶಾಲಾಕ್ಷ ಪುತ್ರಕಳ, ಸಂಘಟನಾ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಎಸ್. ಎಲ್. ಭಾರದ್ವಾಜ್ ಬೇಕಲ್, ಅಧ್ಯಕ್ಷರು, ಹೊಸದುರ್ಗ ತಾಲ್ಲೂಕು ಕನ್ನಡ ಪರಿಷತ್ತು
ಶ್ರೀಕಾಂತ ಕಾಸರಗೋಡು.

ಸ್ವಾಗತ : ಶಂಕರ ಕೆ., ಮಾಜಿ ಕೌನ್ಸಿಲರ್, ಕಾಸರಗೋಡು ನಗರ ಸಭೆ, ಧನ್ಯವಾದ : ಕಾವ್ಯ ಕುಶಲ ಕನ್ನಡ ಗ್ರಾಮ, ಕಾರ್ಯದರ್ಶಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ನಿರೂಪಣೆ : ಕೆ. ಜಗದೀಶ ಕೂಡ್ಲು, ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್.

LEAVE A REPLY

Please enter your comment!
Please enter your name here