ಕಾಸರಗೋಡು : ಕಾಸರಗೋಡು ಕೋಟೆ ಯ ಪೂರ್ವ ಮುಂಭಾಗದಲ್ಲಿ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಶ್ರೀ ಶ್ರೀ ಡಾ. ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಗಳವರಿಂದ ಸ್ಥಾಪಿಸಲ್ಪಟ್ಟ ಶ್ರೀ ಶಾರದಾ ಭಜನಾಶ್ರಮದ ಜೀರ್ಣೋದ್ದಾರ ಹಾಗೂ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ನೂತನ ಕಟ್ಟೆ ಗಳಲ್ಲಿ ವೇದಾಚಾರ್ಯ ಶ್ರೀ ಶ್ರೀ ಉಚ್ಚಿಲ್ಲತಾಯ ಪದ್ಮನಾಭ ತಂತ್ರಿಗಳ ಕಾರ್ಮಿಕತ್ವದಲ್ಲಿ ಡಿಸೆಂಬರ್ 4ಹಾಗೂ 5.ರಂದು ನಡೆಯಲಿರುವ ಬ್ರಹ್ಮ ಕಲಶ ಮತ್ತು 4ರಂದು ಸಂಜೆ 5ಗಂಟೆಗೆ ಮಾಜಿ ಮಂತ್ರಿ ಕೃಷ್ಣ ಜೆ. ಪಾಲೇಮಾರ್ ಅದ್ಯಕ್ಷತೆಯಲ್ಲಿ, ನಡೆಯುವ ಕ್ಷಾತ್ರ ಸಭಾ ಕಾರ್ಯಕ್ರಮ ವನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷರಾದ ಎಚ್. ಆರ್. ಶಶಿಧರ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಲಿರುವ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಬೀರಂತಬಯಲು ಭಜನಾಶ್ರಮ ಸಮಿತಿ ಉಪಾಧ್ಯಕ್ಷ ರಾಜ್ ಕುಮಾರ್ ನಾಗರಕಟ್ಟೆ ಯವರೀಗೆ ಶಾರದಮ್ಮ ಶ್ರೀ ಸನ್ನಿದಿಯಲ್ಲಿ ಪ್ರಾರ್ಥಿಸಿ, ನೀಡಿ ಬಿಡುಗಡೆಗೊಳಿಸಿದರು. ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ, ದೇವಸ್ಥಾನ ಸಮಿತಿ ಪ್ರದಾನ ಕಾರ್ಯದರ್ಶಿ ವಿನೋದ್ ನಾಗರಕಟ್ಟೆ, ಆಡಳಿತ ಸಮಿತಿ ಪದಾಧಿಕಾರಿಗಳಾದ ನವೀನ್ ನಾಯ್ಕ್, ಮೋಹನ್ ದಾಸ್ ಕೊರಕೋಡು, ಪ್ರದೀಪ್ ನಾಯ್ಕ್, ಕೇಶವ, ರಾಮ್ ಮೋಹನ್ ಪ್ರಜ್ವಲ್ ನಾಯ್ಕ್, ಮಹಿಳಾ ಸಮಿತಿ ಅಧ್ಯಕ್ಷೆ ನಿಶಾ ಅನಿಲ್, ಅರುಣಾ ಟೀಚರ್, ಚಂದ್ರಿಕಾ ಕಿಶೋರ್, ಸೌಮ್ಯ ವಿನಯ್, ನಳಿನಿ ಪ್ರಸಾದ್ ಮುಂತಾದವರಿದ್ದರು. ವಾಮನ್ ರಾವ್ ಬೇಕಲ್ ಕಾರ್ಯಕ್ರಮ ನಿರ್ವಹಿಸಿ, ದಿನೇಶ್ ನಾಗರಕಟ್ಟೆ ವಂದಿಸಿದ

