ಕಾಸರಗೋಡು ಕನ್ನಡ ಗ್ರಾಮದ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯಕ್ಕೆ ರಜತ ಮಹೋತ್ಸವ ವರ್ಷ (2000-2026) 25 ಸರಣಿ ದತ್ತಿ ಉಪನ್ಯಾಸ ಮಾಲಿಕೆ, ಕಾಸರಗೋಡು ಸಾಹಿತ್ಯೋತ್ಸವ – ಕನ್ನಡೋತ್ಸವ

0
8

ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಖಾಸಗಿ ನೆಲೆಯಲ್ಲಿ ಬೃಹತ್ ಕನ್ನಡ ಪುಸ್ತಕಗಳ ಸಂಗ್ರಹವುಳ್ಳ ಕೆ.ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದಲ್ಲಿ ಈಗಾಗಲೇ ಸಾಕಷ್ಟು ಕೃತಿಗಳ ಸಂಗ್ರಹವಿದೆ.

ಲೇಖಕರು, ಸಾಹಿತಿಗಳು,ಕವಿಗಳು, ಮಾಧ್ಯಮದವರು, ಶಿಕ್ಷಣ ತಜ್ಞರು,ಸಂಶೋಧಕರು, ಕಲಾವಿದರಿಗಾಗಿ ವಿವಿಧ ಭಾಷೆ, ಸಾಹಿತ್ಯ,ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಅಧ್ಯಯನಕ್ಕೆ ಅಗತ್ಯವಿರುವ ಎಲ್ಲಾ ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಸಂಗ್ರಹಿಸಲಾಗುವುದು.

ಕಾಸರಗೋಡು ಕನ್ನಡ ಗ್ರಾಮದಲ್ಲಿ 2000 ದಲ್ಲಿ ಸ್ಥಾಪನೆಗೊಂಡ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯವು, ಗ್ರಾಮೀಣ ಪರಿಸರದ ವಾತಾವರಣವಿದ್ದು ಅಂತರ ರಾಜ್ಯ,ದೇಶ,ವಿದೇಶಗಳಿಂದ ಗಡಿನಾಡು ಕಾಸರಗೋಡಿಗೆ ಆಗಮಿಸುವ ಕನ್ನಡ ಸಾಂಸ್ಕೃತಿಕ ರಾಯಬಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಲೇಖಕರು, ಸಾಹಿತಿಗಳು, ಕವಿಗಳು, ಮಾಧ್ಯಮದವರು, ಸಂಶೋಧಕರು, ಕಲಾವಿದರು, ಶಿಕ್ಷಣ ತಜ್ಞರು ಹಾಗೂ ಸಾಂಸ್ಕೃತಿಕ ಕಲಾವಿದರ ತಂಡಗಳು ಗಣ್ಯ ಅತಿಥಿಗಳು ಕನ್ನಡ ಗ್ರಾಮವನ್ನು ಭೇಟಿ ನೀಡಿ,ವಿಶ್ರಾಂತಿ ಪಡೆದು ಕಾಸರಗೋಡು ಜಿಲ್ಲೆಯ ಐತಿಹಾಸಿಕ, ಪ್ರವಾಸಿ ಸ್ಥಳಗಳನ್ನು ಸಂದರ್ಶಿಸಬಹುದು.

ಕಾಸರಗೋಡು ಕನ್ನಡ ಗ್ರಾಮದಲ್ಲಿ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಕುರಿತು ವಿಚಾರಗೋಷ್ಠಿ,ವಿಚಾರ ಸಂಕಿರಣ,ಅಧ್ಯಯನ ಗೋಷ್ಠಿ, ಚರ್ಚಾ ಗೋಷ್ಠಿ, ಕಮ್ಮಟ, ತರಬೇತಿ ಶಿಬಿರಗಳು,ವಿಶೇಷ ಉಪನ್ಯಾಸ ಚಿಂತನ ಮಂಥನ, ಸಂವಾದ,ಆತ್ಮೀಯ ಸಮ್ಮಾನವನ್ನು ಏರ್ಪಡಿಸಲು ಕೇರಳ, ಕರ್ನಾಟಕ ಸರಕಾರದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು, ವಿವಿಧ ವಿಶ್ವವಿದ್ಯಾನಿಲಯದ ಪ್ರಸಾರಾಂಗಗಳು ಮತ್ತು ರಾಜ್ಯ,ಜಿಲ್ಲಾ ಮಟ್ಟದ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸ್ಥಳ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮಗಳನ್ನು ಪ್ರತಿ ತಿಂಗಳ 4 ನೇ ಶನಿವಾರದಂದು ಸಂಜೆ ಗಂಟೆ 3.30 ರಿಂದ 6.00 ರ ತನಕ ಏರ್ಪಡಿಸಲಾಗುವುದು. ಕಾಸರಗೋಡು ಕನ್ನಡ ಗ್ರಾಮದ ಗ್ರಂಥಾಲಯದಲ್ಲಿ ನಿರಂತರವಾಗಿ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲಾಗುವುದು.

ಕನ್ನಡ ಗ್ರಾಮದ ಗ್ರಂಥಾಲಯಕ್ಕೆ ಕಂಪ್ಯೂಟರ್ ಗಳು, ಪೀಠೋಪಕರಣಗಳು, ಪುಸ್ತಕಗಳ ಕಪಾಟುಗಳನ್ನು ಕೊಡುಗೆಯಾಗಿ ನೀಡಲು ದಾನಿಗಳು , ಹಾಗೂ ಸರಕಾರದ ವಿವಿಧ ಇಲಾಖೆಗಳು, ದೇವಸ್ಥಾನ ಮಠಗಳು,ಸಂಘ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ನಿರ್ವಹಣೆಗಾಗಿ ದಾನಿಗಳು, ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಲು ವಿನಂತಿಸಲಾಗಿದೆ.

ಕನ್ನಡ ಗ್ರಾಮದ ಗ್ರಂಥಾಲಯದಲ್ಲಿ ಓದುಗರು ಮತ್ತು ಸಾಹಿತ್ಯಾಸಕ್ತರಿಗಾಗಿ ಪ್ರತಿ ತಿಂಗಳ 4 ನೇ ಶನಿವಾರದಂದು ಸಂಜೆ ಗಂಟೆ 3.30 ರಿಂದ 6.00 ರ ತನಕ 25 ಸರಣಿ ದತ್ತಿ ಉಪನ್ಯಾಸ ಮಾಲಿಕೆ ಹಾಗೂ ಕಾಸರಗೋಡು ಸಾಹಿತ್ಯೋತ್ಸವ – ಕನ್ನಡೋತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಅಂತರರಾಜ್ಯದ ವಿವಿಧ ಸಂಘ ಸಂಸ್ಥೆಗಳು, ಅಕಾಡೆಮಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾನಿಲಯಗಳು, ವಿವಿಧ ಇಲಾಖೆಗಳು, ರಾಜ್ಯದ, ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ನಾಡಿನಾದ್ಯಂತ ವೈಯಕ್ತಿಕವಾಗಿಯೂ, ಕೊಡುಗೆಯಾಗಿಯೂ ನೀಡಿರುವ ಬೃಹತ್ ಸಂಗ್ರಹವುಳ್ಳ ಸಾಹಿತ್ಯ ಕೃತಿಗಳ ಪ್ರದರ್ಶನ ಹಾಗೂ ಗಲ್ಫ್ ರಾಷ್ಟ್ರ,ವಿದೇಶಗಳಲ್ಲಿರುವ ಅನಿವಾಸಿ ಭಾರತೀಯ ಕನ್ನಡಿಗರು ಪ್ರಕಟಿಸಿರುವ ವಿವಿಧ ಸಾಹಿತ್ಯ ಪ್ರಕಾರಗಳ ಪುಸ್ತಕಗಳನ್ನು ಸಂಗ್ರಹಿಸಿ ಪ್ರದರ್ಶನವನ್ನು ಏರ್ಪಡಿಸಲು ವ್ಯವಸ್ಥೆ ಮಾಡಲಾಗಿದೆ. ಕಾಸರಗೋಡು ಮಧೂರು ಮುಖ್ಯ ರಸ್ತೆಯ ಮೀಪುಗುರಿ ಎಲ್. ಪಿ. ಶಾಲೆಯ ಪಕ್ಕದ ಪಾರೆಕಟ್ಟೆ, ರಸ್ತೆಯಲ್ಲಿ ಜೆ. ಪಿ.ನಗರ ಬಳಿಯ ಕನ್ನಡ ಗ್ರಾಮದ ಗ್ರಂಥಾಲಯಕ್ಕೆ ಬರಬಹುದು.

ವಿ. ಸೂ :- ಕಾಸರಗೋಡು ಜಿಲ್ಲೆಯವರು ಹಾಗೂ ಜಿಲ್ಲೆಯ ಮೂಲದವರಾಗಿದ್ದು ಪರಊರಿನಲ್ಲಿರುವವರು, ಹೊರ ರಾಜ್ಯ, ಹೊರ ದೇಶಗಳಲ್ಲಿರುವ ಎಲ್ಲಾ ಲೇಖಕರು, ಬರಹಗಾರರು,ಸಾಹಿತಿಗಳು, ಮಾಧ್ಯಮದವರು, ಪ್ರಕಾಶಕರು ಪ್ರಕಟಿಸಿದ ಸಮಗ್ರ ಸಾಹಿತ್ಯ ಕೃತಿಗಳನ್ನು ಕಾಸರಗೋಡು ಕನ್ನಡ ಗ್ರಾಮದ ಗ್ರಂಥಾಲಯದ ಪುಸ್ತಕ ಸಂಗ್ರಹಾಲಯಕ್ಕೆ ತಮ್ಮ ಕೃತಿಗಳನ್ನು ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸಲು ಕೋರಲಾಗಿದೆ. ಸಾಹಿತ್ಯಾಸಕ್ತರು, ಸಾಹಿತ್ಯ ಬಂಧುಗಳು,ಕೃತಿಕಾರರು, ಪ್ರಕಾಶಕರು ತಮ್ಮ ಹೆಸರು, ವಿಳಾಸ,ಮೊಬೈಲ್ ವಾಟ್ಸ್ ಪ್ ಮೂಲಕ ತಮ್ಮ ಭಾವಚಿತ್ರದೊಂದಿಗೆ ಪ್ರಕಟಿತ ವಿವಿಧ ಸಾಹಿತ್ಯ ಪ್ರಕಾರಗಳನ್ನು ಪುಸ್ತಕಗಳನ್ನು ಕಳುಹಿಸಲು ವಿನಂತಿಸಲಾಗಿದೆ.

ಸರಣಿ ದತ್ತಿ ಉಪನ್ಯಾಸ ಮಾಲಿಕೆ ಹಾಗೂ ಕಾಸರಗೋಡು ಸಾಹಿತ್ಯೋತ್ಸವ- ಕನ್ನಡೋತ್ಸವ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರಿಗೆ ಭಾಗವಹಿಸಲು ಅವಕಾಶವಿರುತ್ತದೆ. ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಆಮಂತ್ರಿಸಲಾಗುವುದು.

ಶಿವರಾಮ ಕಾಸರಗೋಡು, ಅಧ್ಯಕ್ಷರು, ಕೆ.ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ, ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು -671121
ಮೊಬೈಲ್ :-9448572016 ಈ ವಿಳಾಸಕ್ಕೆ ಸಂಪರ್ಕಿಸಬಹುದು. ಗ್ರಂಥಾಲಯದ ನಿರ್ವಹಣೆಗಾಗಿ Shivarama kasaragod Google pay No-9448572016 ( ಗೂಗಲ್ ಪೇ ನಲ್ಲಿ ದೇಣಿಗೆಯನ್ನು ಪಾವತಿಸಬಹುದು.

SHIVARAMA KASARAGOD President,
Mobile :-9448572016

LEAVE A REPLY

Please enter your comment!
Please enter your name here