ಕಟೀಲು : ದುರ್ಗಾ ಜಪಯಜ್ಞದಿಂದ ಆತ್ಮಶಕ್ತಿ ಜಾಗೃತಿ – ಯೋಗಾನಂದ ಸರಸ್ವತಿ ಸ್ವಾಮೀಜಿ

0
42

ಕಟೀಲು : ಶ್ರೀ ದುರ್ಗಾ ಜಪಯಜ್ಞ ಅಭಿಯಾನ ನಮ್ಮೆಲ್ಲರಲ್ಲೂ ಹೊಸ ಚೈತನ್ಯವನ್ನು ತಂದಿದೆ. ನಮ್ಮ ನೆಲ, ಜಲ, ವಾಯು ಹೀಗೆ ಪರಿಸರ ಸಂರಕ್ಷಣೆಯನ್ನು ಮಾಡುವ ಮೂಲಕ ನಮ್ಮ ಭಾರತವನ್ನು ಉಳಿಸಬೇಕಾಗಿದೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಕಟೀಲು ದೇವಸ್ಥಾನದ ಭ್ರಾಮರೀವನದಲ್ಲಿ ಶ್ರೀ ರಾಮಕೃಷ್ಣ ತಪೋವನ, ಪೊಳಲಿ ಹಾಗೂ ಅರ್ಘ್ಯ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ದುರ್ಗಾಜಪಯಜ್ಞ ಅಭಿಯಾನದ ಸಲುವಾಗಿ ಜನವರಿ 1 ರ ಬುಧವಾರ ನಡೆದ ಶ್ರೀ ದುರ್ಗಾಹೋಮ ಮತ್ತು ಜಪಯಜ್ಞದ ಪೂರ್ಣಾಹುತಿ ನಡೆದ ಬಳಿಕ ಆಶೀರ್ವಚನ ನೀಡಿದರು.

ಮುಖ್ಯ ಭಾಷಣಗೈದ ಆದರ್ಶ ಗೋಖಲೆ, ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ ಎನ್ನುವ ದುರ್ಗಾಜಪ ಪ್ರತಿದಿನ ರೂಢಿಯಾಗಲಿ. ಆ ಮೂಲಕ ನಮ್ಮಲ್ಲಿನ ಆತ್ಮಶಕ್ತಿಯನ್ನು ಜಾಗೃತಿಗೊಳಿಸೋಣ, ದುರ್ಗೆಯ ಸಮನಾದ ಭಾರತಮಾತೆಯ ಆರಾಧನೆ ನಮ್ಮ ಮನ, ಮನೆಯಲ್ಲಿ ಸದಾ ಆಗಬೇಕು ಎಂದರು.


ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಸನಾತನ ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನಗಳು ನಿರಂತರ ಆಗುತ್ತಿದ್ದರೂ ನಮ್ಮ ಆಚರಣೆ, ಜಪ ತಪಸ್ಸಿನ ಶಕ್ತಿ, ಸಂಸ್ಕೃತಿ, ನಂಬಿಕೆಗಳಿಂದ ಸಾಧ್ಯವಾಗಿಲ್ಲ. ಶಿಕ್ಷಣದ ಮೂಲಕ ಹಾದಿ ತಪ್ಪಿಸುವ ಕೆಲಸವನ್ನು ಮೆಕಾಲೆ ಶಿಕ್ಷಣ ಮಾಡಿದೆ. ಇದನ್ನು ಮೀರಿ ನಮ್ಮ ದೇಶವನ್ನು ಬಲಿಷ್ಟವಾಗಿಸುವ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕೆಂದರು.
ಕಟೀಲು ದೇಗುಲದ ಆಡಳಿತ ಮಹಾ ಮಂಡಳಿಯ ಕೊಡೆತ್ತೂರು ಗುತ್ತು ಸನತ್ ಕುಮಾರ ಶೆಟ್ಟಿ , ವಾಸುದೇವ ಆಸ್ರಣ್ಣ, ಕ್ಯಾಪ್ಸ್ ಫೌಂಡೇಷನ್‌ನ ಸಿಎ ಚಂದ್ರಶೇಖರ ಶೆಟ್ಟಿ ಮತ್ತಿತರರಿದ್ದರು. ತಪೋವನದ ರಂಜಿತ್ ಸ್ವಾಗತಿಸಿದರು. ಜಗದೀಶ ಶರ್ಮ ನಿರೂಪಿಸಿದರು.

ಶ್ರೀ ದುರ್ಗಾಪರಮೇಶ್ವರೀ ಭಾರತಮಾತೆಯ ದಿವ್ಯ ಸ್ವರೂಪ ಎಂಬ ಕಲ್ಪನೆಯಂತೆ ವಂದೇ ಮಾತರಂ ರಚನೆಯ 150 ವರ್ಷಗಳ ಸಂಭ್ರಮವನ್ನು ದುರ್ಗಾಜಪಯಜ್ಞ ಅಭಿಯಾನದ ಮೂಲಕ ಹಮ್ಮಿಕೊಳ್ಳಲಾಗಿತ್ತು. ವಾಟ್ಸಪ್ ಮೂಲಕ 6800, ಮಂದಿ ನೋಂದಾಯಿಸಿದ್ದರೆ ದಿನಂಪ್ರತಿ ಕನಿಷ್ಟ 108 ಜಪವನ್ನು ಕಳೆದ ಒಂದು ತಿಂಗಳಿಂದ ಮಾಡುತ್ತ ಬಂದಿದ್ದರು. ವಾಟ್ಸಪ್‌ನಲ್ಲಿ ನೋಂದಾಯಿಸದೆ ಸ್ವಯಂ ಪ್ರೇರಣೆಯಿಂದ ಮತ್ತಷ್ಟು ಮಂದಿ ಜಪ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು. ವೇದವ್ಯಾಸ ತಂತ್ರಿ, ಸ್ಕಂದಪ್ರಸಾದ ಭಟ್ ನೇತೃತ್ವದಲ್ಲಿ ದುರ್ಗಾಹೋಮ ನಡೆಯಿತು.

LEAVE A REPLY

Please enter your comment!
Please enter your name here