ಕಟೀಲು: ಎಕ್ಕಾರು ಲಯನ್ಸ್ ಕ್ಲಬ್ ನಿಂದ ಸರಕಾರಿ ಶಾಲೆಗೆ ಸಮವಸ್ತ್ರ ವಿತರಣೆ

0
147

ಕಟೀಲು: ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರು ನಿಂದ ದ.ಕ.ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡಗ ಎಕ್ಕಾರು ಇಲ್ಲಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕಟೀಲು ಎಕ್ಕಾರು ಅಧ್ಯಕ್ಷರಾದ ಚಂದ್ರಶೇಖರ್ ವಹಿಸಿ ಸರಕಾರಿ ಶಾಲೆಗಳಿಗೆ ಸಾಧ್ಯವಾದಷ್ಟು ಸಹಕಾರ ನೀಡುವ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮ ವಸ್ತ್ರ ವಿತರಿಸಿದ ಜಿಲ್ಲಾ ಗ್ಲೋಬಲ್ ಕಾಸ್ ನ ಮುಖ್ಯ ಸಯೋಜಕರಾದ ಲಯನ್ ವೆಂಕಟೇಶ ಹೆಬ್ಬಾರ್ ಮಾತನಾಡಿ , ಸರ್ಕಾರಿ ಶಾಲೆಗಳು ಸ್ಥಳೀಯರ ಹಾಗೂ ಸ್ಥಳೀಯ ಸೇವಾ ಸಂಸ್ಥೆಗಳ ಸಹಕಾರದಿಂದ ಶಾಲೆಯನ್ನು ನಡೆಸುತ್ತಿದ್ದು ಸ್ಥಳೀಯರು ಹಾಗೂ ಸೇವಾ ಸಂಸ್ಥೆಗಳು ಆದಷ್ಟು ಸಹಕಾರವನ್ನು ನೀಡಿ ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡಬೇಕಾಗಿ ಕರೆ ನೀಡಿದರು.

ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶೇಖರ್ ಶೆಟ್ಟಿ , ಕೋಶಾಧಿಕಾರಿ ದಯಾನಂದ ರೈ , ದೀಪಕ್ ಪೆರ್ಮುದೆ , ಗಂಗಾಧರ್ , ರೊನಾಲ್ಡ್ ಡಿಸೋಜಾ, ಮುಖ್ಯ ಶಿಕ್ಷಕಿ ಜಯಂತಿ , ಎಸ್ ಡಿ ಎಂ ಸಿ ಅಧ್ಯಕ್ಷೆ ಚಂದ್ರಾವತಿ, ಸದಸ್ಯರು, ಪೋಷಕರು, ಪಾಲಕರು, ಶಿಕ್ಷಕರು ಉಪಸ್ಥಿತರಿದ್ದರು. ಸಂಸ್ಥೆಯ ವತಿಯಿಂದ ಲಯನ್ ವೆಂಕಟೇಶ ಹೆಬ್ಬಾರ ಇವರನ್ನು ಗೌರವಿಸಲಾಯಿತು. ಶಾಲಾ ಶಿಕ್ಷಕಿ ವಾಣಿ ಅವರು ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ಜಯಂತಿಯವರು ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಚಂದ್ರಾವತಿಯವರು ವಂದಿಸಿದರು.

LEAVE A REPLY

Please enter your comment!
Please enter your name here