ಕಾಟಿಪಳ್ಳ ಸ.ಹಿ.ಪ್ರಾ. ಶಾಲೆ: ಆಂಗ್ಲ ಮಾಧ್ಯಮ ತರಗತಿಯ ಉದ್ಘಾಟನೆ

0
12

ಸುರತ್ಕಲ್: ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ 3ನೇ ವಿಭಾಗ, ಕಾಟಿಪಳ್ಳ. ಮತ್ತು ಹಳೆ ವಿದ್ಯಾರ್ಥಿ ಸಂಘ, ಕಾಟಿಪಳ್ಳ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಂಗ್ಲ ಮಾಧ್ಯಮ (ದ್ವಿಭಾಷಾ) ತರಗತಿಯ ಉದ್ಘಾಟನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ನೆರವೇರಿತು. ‌

ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಲೋಕೇಶ್ ಬೊಳ್ಳಾಜೆಯವರು ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸ್ಥಳೀಯ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಈ ಒಂದು ಶಾಲೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಬೇಕೆಂದು ನುಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಉದ್ಯಮಿ ಸತೀಶ್ ಆಚಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಬು ಆಚಾರ್, ಉದ್ಯಮಿ ಜಯ ಶೆಟ್ಟಿ, ಗೌರವ ಅಧ್ಯಕ್ಷರಾದ ಗುರುಪ್ರಸಾದ್ ಹೊಳ್ಳ ಮತ್ತು ಲಕ್ಷ್ಮಣ್ ಆಚಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಶೆಟ್ಟಿಯವರು ಈ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಗಾಗಿ ಸ್ಥಳೀಯ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸ ಬೇಕೆಂದು ಈ ಮೂಲಕ ವಿನಂತಿಸಿ ಕೊಂಡರು. ಶಾಲಾ ಶಿಕ್ಷಕಿಯಾದ ಇಂದಿರಾರವರು ಸ್ವಾಗತವನ್ನು ಮಾಡಿದರು ಮತ್ತು ಪುಷ್ಪ ಬಂಗೇರ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here