ಬಂಟ್ವಾಳ : ಅಶಕ್ತ ಕುಟುಂಬಗಳಿಗೆ ಸದಾ ಸ್ಪಂದಿಸಿ ಸಹಾಯಹಸ್ತ ಚಾಚುವ ಕಟ್ಟೆಮಾರ್ ಶ್ರೀ ಮಂತ್ರದೇವತಾ ಜನಾ ಸೇವಾ ಟ್ರಸ್ಟ್ ತನ್ನ 21ನೇ ಸೇವಾ ಯೋಜನೆಯ 24260/- ರೂಪಾಯಿಯನ್ನು ಬೆನ್ನು ನೋವು, ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಂಟ್ವಾಳ ತಾಲೂಕಿನ ಸಜಿಪ ಮೂನ್ನುರು ಶಾರದಾ ನಗರ ಅಲಾಡಿ ಎಂಬಲ್ಲಿಯ 13 ವರ್ಷದ ವಂದಿತ ಎಂಬ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಟ್ಟೆಮಾರ್ ಶ್ರೀ ಮಂತ್ರದೇವತಾ ಜನಾ ಸೇವಾ ಟ್ರಸ್ಟ್ ನ ಟ್ರಸ್ಟೀ ಕಿಶೋರ್ ಕುಮಾರ್ ಕಟ್ಟೆಮಾರ್ ಮತ್ತಿತರರು ಉಪಸ್ಥಿತರಿದ್ದರು.