ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ತರಬೇತಿ ನೀಡಿದ ಕಾಪು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ “ಕಿಶೋರ ಯಕ್ಷಗಾನ ಸಂಭ್ರಮ – 2025” ಸಮಾರಂಭ ಇಂದು ದಿನಾಂಕ 03-12-2025 ರಂದು ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಶಾಸಕರು, ಕಾಪು ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಪರ್ಯಾಯ ಶ್ರೀಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ, ಯಕ್ಷಗಾನ ಕಲಾರಂಗ (ರಿ.) ಉಡುಪಿ ಪ್ರದರ್ಶನಾ ಸಂಘಟನಾ ಸಮಿತಿಗಳು, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಹಿರಿಯಡಕ ಸಹಕಾರದೊಂದಿಗೆ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಆಯೋಜಿಸಲಾದ ಈ “ಕಿಶೋರ ಯಕ್ಷಗಾನ – 2025” ಹಿರಿಯಡಕ ವೀರಭದ್ರ ದೇವಸ್ಥಾನ ವಠಾರದಲ್ಲಿ ದಿನಾಂಕ 03-12-2023 ರಿಂದ 04-12-2025 ರ ವರೆಗೆ ಸಂಜೆ 5.00 ರಿಂದ ರಾತ್ರಿ 8.00 ರ ವರೆಗೆ ದಿನಕ್ಕೆ ಎರಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಎರಡು ಪ್ರಸಂಗಗಳಂತೆ ನಡೆಯಲಿದೆ.
ಈ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಲೈಟ್ ಫ್ರೈ. ಲಿ ಗುರುಪ್ರಸಾದ್, ಉದ್ಯಮಿಗಳಾದ ಶ್ರೀನಿವಾಸ, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಸದಸ್ಯರಾದ ವಿ.ಜಿ ಶೆಟ್ಟಿ, ನಾರಾಯಣ ಎಂ ಹೆಗಡೆ, ಪ್ರಾಂಶುಪಾಲರಾದ ಮಂಜುನಾಥ್, ರೂಪರೇಖಾ ಉಪಸ್ಥಿತರಿದ್ದರು.

