ಮೂಡುಬಿದಿರೆ: ತಾಲೂಕಿನ ಕೆಲ್ಲಪುತ್ತಿಗೆ ಗ್ರಾಮದ ನಮನ ಯುವ ಬಾಂಧವೆರ್ ಹಾಗೂ ಮಹಾದೇವಿ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಜುಲೈ 27 ರಂದು ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಸಾಧನೆಯನ್ನು ಮಾಡಿದ ಸಾಧಕರನ್ನು ಸನ್ಮಾನಿಸಿದರು. ಗ್ರಾಮ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಗ್ರಾಮದ ಜನರಿಗೆ ಉತ್ತಮ ಅವಕಾಶಗಳು ಹಾಗೂ ಆರೋಗ್ಯದ ಬಗೆಗೆ ಜಾಗೃತಿ ಮೂಡಲು ಸಾಧ್ಯ ಇದೆ ಎಂದು ತಿಳಿಸಿದರು. ವೇದಿಕೆಯಲ್ಲಿ ನಮನ ಯುವ ಬಾಂಧವೆರ್ ಹಾಗೂ ಮಹಾದೇವಿ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ