ಡಾ| ಸುಷ್ಮಾ ಶಂಕರ್ ಬೆಂಗಳೂರು ಸರ್ವಾಧ್ಯಕ್ಷರಾಗಿ ಆಯ್ಕೆ
ಬೆಂಗಳೂರಿನ ಇಮ್ಮಡಿ ಹಳ್ಳಿ ರಸ್ತೆ ವೈಟ್ ಫೀಲ್ಡ್ನ “ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್(ರಿ.) ಹಾಗೂ ಡಾ| ಸುಷ್ಮಾ ಶಂಕರ್ ಪ್ರಧಾನ ಸಂಪಾದಕರಾಗಿರುವ ”ತೊದಲ್ನುಡಿ ಮಾಸ ಪತ್ರಿಕೆ” ಮತ್ತು ಗಡಿನಾಡು ಕಾಸರಗೋಡಿನ ಡಾ| ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸಾರಥ್ಯದ ಕನ್ನಡ ಭವನ ಮತ್ತು ಗ್ರಂಥಾಲಯ(ರಿ.), ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಕಾಸರಗೋಡು, ಕಾಸರಗೋಡು ಕನ್ನಡ ಭವನ ಪ್ರಕಾಶನ, ಸಂಯುಕ್ತ ಆಶ್ರಯದಲ್ಲಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್(ರಿ.) ಅಡಿಟೋರಿಯಮ್‌ನಲ್ಲಿ 20.7.25 ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ “ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ” “ಚುಟುಕು ಕವಿ ಕಾವ್ಯ ಸಂಗಮ” “ಪ್ರಶಸ್ತಿ ಪ್ರದಾನ” ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಯತ್ರಿ, ಸಂಘಟಕಿ, ತೊದಲ್ನುಡಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರು, ದ್ರಾವಿಡ ಭಾಷಾ ಅನುವಾದಕ ಸಂಘ, ಬೆಂಗಳೂರು ಇದರ ಅಧ್ಯಕ್ಷರೂ ಆಗಿರುವ ಡಾ| ಸುಷ್ಮಾ ಶಂಕರ್ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
“ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ” “ಚುಟುಕು ಕವಿ ಕಾವ್ಯ ಸಂಗಮ” ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಖ್ಯಾತ ಲೇಖಕರು, ಕವಿಗಳು, ಪತ್ರಕರ್ತರುಗಳು ಭಾಗವಹಿಸಲಿದ್ದಾರೆ. ಗಣ್ಯರು, ಕನ್ನಡ ಭವನದ ಗೌರವಾನ್ವಿತ ಪ್ರಶಸ್ತಿಗಳಾದ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟೀಯ ಪ್ರಶಸ್ತಿ” “ನಾಡೋಜ ಡಾ| ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ” ಕನ್ನಡ ಭವನದ ಅಂತಾರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ” ಸ್ವೀಕರಿಸಲಿದ್ದಾರೆ. ಎಂದು ಕಾರ್ಯಕ್ರಮ ಸಂಯೋಜಕರಾದ ಕನ್ನಡ ಭವನದ ಡಾ| ವಾಮನ್ ರಾವ್ ಬೇಕಲ್ ಹಾಗೂ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟಿನ ಡಾ| ರಾಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.