ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ – 2025, ಕೇರಳ ರಾಜ್ಯ – ಕಾಸರಗೋಡು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ, ಪ್ರಬಂಧ ಸ್ಪರ್ಧೆ

0
15


ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ನಡೆಯುವ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ಹಾಗೂ ಶಿವರಾಮ ಕಾಸರಗೋಡು 60 ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ಕೇರಳ ರಾಜ್ಯದ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ,ಪ್ರಬಂಧ,ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸಣ್ಣ ಕಥೆ ರಚನೆ (ಎ 4 ಅಳತೆಯ ಹಾಳೆಯಲ್ಲಿ ಒಂದು ಪುಟ ಮೀರದಂತೆ ಇರಬೇಕು). ಕವನ ರಚನೆ ಸ್ಪರ್ಧೆ (12 ಸಾಲು ಮೀರಬಾರದು ).ನಾನು ಓದಿದ ಉತ್ತಮ ಪುಸ್ತಕ (ಎ 4 ಹಾಳೆಯಲ್ಲಿ ಎರಡು ಪುಟ ಮೀರದಂತೆ ಇರಬೇಕು.)ಕೇರಳ ರಾಜ್ಯ – ಕಾಸರಗೋಡು ಜಿಲ್ಲೆಯಲ್ಲಿ ವಾಸವಾಗಿರುವ,ಉದ್ಯೋಗ, ವ್ಯವಹಾರದಲ್ಲಿರುವವರು ಮತ್ತು ಮೂಲತಃ ಕಾಸರಗೋಡು ಜಿಲ್ಲೆಯವರಾಗಿದ್ದು ರಾಜ್ಯ , ದೇಶ, ವಿದೇಶಗಳಲ್ಲಿ ವಾಸವಾಗಿರುವ ಸಾಹಿತ್ಯಾಸಕ್ತರು ಮುಕ್ತವಾಗಿ ಭಾಗವಹಿಸಬಹುದು.
ಪ್ರತಿ ಸ್ಪರ್ಧಾ ವಿಭಾಗದಲ್ಲಿ ಪ್ರಥಮ,ದ್ವಿತೀಯ,ತೃತೀಯ ಮತ್ತು 60 ಮಂದಿಗೆ ಆಯ್ಕೆ ಸಮಿತಿಯವರು ಗುರುತಿಸಲ್ಪಟ್ಟ ಸಣ್ಣ ಕಥೆ, ಕವನ, ಪ್ರಬಂಧ ರಚಿಸಿದ ಸಾಹಿತ್ಯಾಸಕ್ತರಿಗೆ ವಿಶೇಷ ಬಹುಮಾನ,ಪ್ರಮಾಣ ಪತ್ರ,ಸ್ಮರಣಿಕೆಯೊಂದಿಗೆ ಗೌರವಿಸಲಾಗುವುದು.
ಸಾಹಿತ್ಯಾಸಕ್ತ ಬಂಧುಗಳು, ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು-671121 ಮೊಬೈಲ್ :-9448572016,
9901951965
ಈ ವಿಳಾಸಕ್ಕೆ 2025 ಅಕ್ಟೋಬರ್ 20 ರ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಲು ಕೋರಲಾಗಿದೆ. ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಮತ್ತು ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ ಎಲ್ಲಾ ವಿಭಾಗದ ಸಾಹಿತ್ಯಾಸಕ್ತರು ಮುಕ್ತವಾಗಿ ಭಾಗವಹಿಸುವುದಕ್ಕಾಗಿ ಈ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

LEAVE A REPLY

Please enter your comment!
Please enter your name here