ಜು.20ರಂದು ಬೆಂಗಳೂರಿನಲ್ಲಿ ಕೇರಳ – ಕರ್ನಾಟಕ ನುಡಿ ಸಂಭ್ರಮ

0
55

ಬೆಂಗಳೂರು : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕಾಸರಗೋಡಿನ ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಮತ್ತು ತೊದಲ್ನುಡಿ ಮಕ್ಕಳ ಸಾಹಿತ್ಯ ಮಾಸಿಕದ ಜಂಟಿ ಆಶ್ರಯದಲ್ಲಿ ಕೇರಳ – ಕರ್ನಾಟಕ ಕನ್ನಡ ನುಡಿ ಸಂಭ್ರಮ, ಪ್ರಶಸ್ತಿ ಪ್ರದಾನ ಮತ್ತು ಚುಟುಕು ಕವಿ ಕಾವ್ಯ ಸಂಗಮ ಕಾರ್ಯಕ್ರಮವು ಬೆಂಗಳೂರಿನ ವೈಟ್ ಫೀಲ್ಡ್ ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಆವರಣದಲ್ಲಿ ಜುಲೈ 20ರಂದು ಬೆಳಿಗ್ಗೆ 10ರಿಂದ ನಡೆಯಲಿದೆ. ತೊದಲ್ನುಡಿ ಸಂಪಾದಕಿ ಡಾ. ಸುಷ್ಮಾ ಶಂಕರ್ ಸಭೆಯ ಅಧ್ಯಕ್ಷತೆ ವಹಿಸುವರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕರಾದ ಡಾ. ಕೆ ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಉದ್ಘಾಟಿಸುವರು. ಕರ್ನಾಟಕ ಸರಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರಿನ ಆರ್ಟ್ ಅಫ್ ಲಿವಿಂಗ್ ಆಚಾರ್ಯ ಆರ್ ಶ್ರೀನಿವಾಸ್ ಆಶೀರ್ವಚನ ನೀಡುವರು. ಸರಸ್ವತಿ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಬಿ. ಶಂಕರ್, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಬೆಂಗಳೂರು ಘಟಕದ ಅಧ್ಯಕ್ಷ ಹಾ. ಮ. ಸತೀಶ ಭಾಗವಹಿಸುವರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಗಣೇಶ್ ಕಾಸರಗೋಡು, ಸುಬ್ರಹ್ಮಣ್ಯ ಬಾಡೂರು, ಪ್ರಾಧ್ಯಾಪಕ ಡಾ. ಬಾಲಕೃಷ್ಣ ಎಸ್ ಮುದ್ದೋಡಿ, ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ-2025, ಡಾ. ಸುಷ್ಮಾ ಶಂಕರ್ ಹಾಗೂ ಪ್ರಕಾಶ ಮತ್ತಿಹಳ್ಳಿ ಅವರಿಗೆ ಡಾ. ಕಯ್ಯಾರ ಕಿಂಞಣ್ಣ ರೈ ರಾಷ್ಟ್ರೀಯ ಪ್ರಶಸ್ತಿ – 2025 ಮತ್ತು ಪದ ದೇವರಾಜ್, ಹಾ. ಮ. ಸತೀಶ, ಆರ್ ಶ್ರೀನಿವಾಸ, ಡಾ. ಕೆ ಮಲರ್ ವಿಳಿ, ಮೇರಿ ಜೋಸೆಫ್, ಡಾ. ರವಿಶಂಕರ ಎ ಕೆ ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ-2025 ಪ್ರದಾನ ಮಾಡಲಾಗುವುದು. ನಂತರ ಸುಮಾರು 20 ಕವಿಗಳಿಂದ ಚುಟುಕು ಕಾವ್ಯ ಸಂಗಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಡಾ. ಕಿಶೋರ್, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಸಹಕರಿಸುವರು ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here