ಮೂಡುಬಿದಿರೆ: ವಿದ್ಯಾಗಿರಿ ಹಂಡೇಲಿನಲ್ಲಿರುವ ಕುಲಾಲ ಸಂಘ ಮೂಡುಬಿದಿರೆ ಆಶ್ರಯದಲ್ಲಿ ಪ್ರಥಮ ವರ್ಷದ ಕೆಸರ್‌ಡೊಂಜಿ ದಿನ ಆಟೋಟ ಸ್ಪರ್ಧೆ ಹಂಡೇಲು ಮರಾಯಿಗುತ್ತು ಬಾಕಿಮಾರು ಗದ್ದೆಯಲ್ಲಿ ಭಾನುವಾರ ನಡೆಯಿತು.
ಹಂಡೇಲುಗುತ್ತು ಧನಕೀರ್ತಿ ಬಲಿಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಣ್ಣಿನೊಂದಿಗೆ ಕುಲಾಲ ಸಮಾಜದವರಿಗೆ ಅವಿನಾಬಾವ ಸಂಬಧಂವಿದೆ. ಮಣ್ಣಿನಲ್ಲೇ ಇದ್ದು, ಮಣ್ಣನ್ನೇ ನಂಬಿ ತಮ್ಮ ಕುಲಕಸುಬು ಮಾಡುತ್ತಿರುವ ಕುಲಾಲರು ಕೆಸರ್‌ಡೊಂಜಿ ದಿನ ಕಾರ್ಯಕ್ರಮವನ್ನು ಇಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಸಂಘಟನೆ ಇಂತಹ ಕಾರ್ಯಕ್ರಮದ ಮೂಲಕ ಬಲಿಷ್ಠವಾಗಲಿ ಎಂದರು.
ಸಂಘದ ಅಧ್ಯಕ್ಷ ಸತೀಶ್ ಕುಲಾಲ್ ಏರಿಮಾರು ಅಧ್ಯಕ್ಷತೆ ವಹಿಸಿದರು.
ಪುತ್ತಿಗೆ ಗ್ರಾಪಂ ಮಾಜಿ ಸದಸ್ಯ ಶಿವಾನಂದ ಪೂಜಾರಿ ಹಂಡೇಲು ದೇವಸ, ಕುಲಾಲ ಸಂಘದ ಗೌರವಾಧ್ಯಕ್ಷರಾದ ಶಂಕರ್ ಕುಲಾಲ್, ಸುಂದರ್ ಕುಲಾಲ್ ಕಡಂದಲೆ, ಸ್ಥಾಪಕಾಧ್ಯಕ್ಷ ಸುಬ್ಬಯ್ಯ ಬಂಗೇರ, ಕಾರ್ಯದರ್ಶಿ ವಿಶ್ವನಾಥ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಕುಲಾಲ್ ಉಪಸ್ಥಿತರಿದ್ದರು.
ಗಾಯತ್ರಿ ಮೋಹನ್‌ಚಂದ್ರ ಸ್ವಾಗತಿಸಿದರು. ಸಂತೋಷ್ ಕುಲಾಲ್ ಸಂಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹಗ್ಗಜಗ್ಗಾಟ, ಬಾಲ್ ಪಾಸಿಂಗ್, ಕಂಗದ ಕಿಂಗ್, ಲಿಂಬೆ ಚಮಚ ಓಟ, ಸೋಗೆ ಓಟ, ನಿಧಿಶೋಧ ಸಹಿತ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.