ಮೂಡುಬಿದಿರೆ: ಕೆಎಫ್‌ಸಿ ಸ್ಪೋಟ್ಸ್ & ಗೇಮ್ಸ್ ಕ್ಲಬ್ ಕಲ್ಲಮುಂಡ್ಕೂರು ಆಯೋಜನೆಯ ತೃತೀಯ ವರ್ಷದ ಕೆಸರ್ದ ಗಮ್ಮತ್-2025 ಕ್ರೀಡಾಕೂಟವು ಜು. 20ರಂದು ದೈಲಬೆಟ್ಟು ದೇವಸ್ಥಾನ ಮುಂಭಾಗದ ಗದ್ದೆಯಲ್ಲಿ ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಜರಗಲಿದೆ.
ವಿಶೇಷವಾಗಿ ಪುರುಷರಿಗೆ ವಾಲಿಬಾಲ್, ಓಟ, ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್, ಓಟ, ಹಗ್ಗಜಗ್ಗಾಟ ಹಾಗೂ ಮಕ್ಕಳಿಗೆ ಲಿಂಬೆ ಚಮಚ, ಓಟ ಸೇರಿದಂತೆ ಇನ್ನಿತ್ತರ ಆಟೋಟಗಳು ಕಲ್ಲಮುಂಡ್ಕೂರು ಮತ್ತು ನಿಡ್ಡೋಡಿ ಗ್ರಾಮಸ್ಥರಿಗೆ ಆಯೋಜಿಸಲಾಗಿದೆ.