ಹಿಂದಿನ ಕಾಲದ ಹಿರಿಯರ ಕೃಷಿ ಜೀವನ ಇಂದಿನ ಯುವಕರಿಗೆ ಮಾದರಿಯಾಗಬೇಕು -ವಾಮನ ಕೋಟ್ಯಾನ್
ಮುಲ್ಕಿ: ಕಿಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸಂಜೀವಿನಿ ಒಕ್ಕೂಟ, ಶಿಮಂತೂರು-ಅತಿಕಾರಿಬೆಟ್ಟು. ಕಿಲ್ಪಾಡಿ ರೋಟರಿ ಕ್ಲಬ್ ಗ್ರಾಮೀಣ ದಳದ ಸಹಯೋಗದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಹಿಂದಿನ ಕಾಲದ ಆಷಾಢ ಕಷ್ಟದ ದಿನಗಳಲ್ಲಿ ಹಿರಿಯರ ಜೀವನ ಶೈಲಿ ಕಷ್ಟಕರವಾಗಿತ್ತು. ಆ ದಿನಗಳಲ್ಲಿ ಹಿರಿಯರ ಕೃಷಿ ಜೀವನ ಇಂದಿನ ಯುವಕರಿಗೆ ಮಾದರಿ ಎಂದರು. ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಮಾಧವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿಲ್ಪಾಡಿ ಗ್ರಾ ಪಂ ಅಧ್ಯಕ್ಷ ವಿಕಾಸ್ ಶೆಟ್ಟಿ,ಉಪಾಧ್ಯಕ್ಷೆ ದಮಯಂತಿ, ಸದಸ್ಯರಾದ ಗೋಪಿನಾಥ ಪಡಂಗ, ರಾಜೇಶ್, ದಿನೇಶ್, ಶಾಂತ, ಲೀಲಾವತಿ, ಲಲಿತಾ ಯಾದವ, ಮಮತಾ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪೂರ್ಣಿಮ
ತಾಲೂಕಿನ ವಲಯ ಮೇಲ್ವಿಚಾರಕಿ ಪ್ರಜ್ವತ , ಸಿಬ್ಬಂದಿಗಳಾದ ಜಯಲಕ್ಷ್ಮಿ, ನವಿತಾ, ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ಪಶುಸಖಿ ಪ್ರೀತಿಕಾ ಡಿ ಅಮೀನ್ ನಿರೂಪಿಸಿದರು.
ಬಳಿಕ ಆಷಾಢ ಮಾಸದ ತುಳುನಾಡ ಖಾದ್ಯಗಳ ಸವಿಯೂಟ ನಡೆಯಿತು.