ಮಹಿಳೆಯ ಚಿಕಿತ್ಸೆಗೆ ಬೇಕಿದೆ ಸಹೃದಯರ ನೆರವು

0
802


ಮೂಡುಬಿದಿರೆ: ಇಲ್ಲಿನ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ಜನತಾ ನಗರದ ನಿವಾಸಿ ಅಶೋಕ್ ಆಚಾರ್ಯ ಅವರ ಪತ್ನಿ ಮೀನಾಕ್ಷಿ ಆಚಾರ್ಯ ಎಂಬವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಮೀನಾಕ್ಷಿ ಅವರು ಕಳೆದ ಏಳು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಈಗಾಗಲೇ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಎರಡು ಲಕ್ಷ ರೂ. ವೆಚ್ಚ ಮಾಡಿಕೊಂಡು ಚಿಕಿತ್ಸೆಯನ್ನು ಪಡೆದಿದ್ದಾರೆ. ಅವರು ಸಂಪೂರ್ಣ ಗುಣವಾಗಲು ಸುಮಾರು 3 ಲಕ್ಷ ರೂ. ವೆಚ್ಚದ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಕೂಲಿ ಕೆಲಸ ಮಾಡುತ್ತಿರುವ ಅವರ ಪತಿ, ಬೀಡಿ ಕಟ್ಟುತ್ತಿದ್ದ ಮೀನಾಕ್ಷಿ ಅವರಿಗೆ ಶಸ್ತ್ರ ಚಿಕಿತ್ಸೆಯ ಮೊತ್ತವನ್ನು ಭರಿಸಲು ಕಷ್ಟವಾಗಿದೆ. ಬಡ ಕುಟುಂಬವು ಸಹೃದಯ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.


Bank Detail:
NAME: Meenakshi
Bank Name: Union Bank
Branch Kadandale
IFSC Code: UBIN0903507
Account Number: 520191003478412

LEAVE A REPLY

Please enter your comment!
Please enter your name here