ಕಿನ್ನಿಗೋಳಿ: ಅತ್ತೂರು ಹಾಲಿನ ಸೊಸೈಟಿ ಬಳಿ ಹಾಡು ಹಗಲೇ ಚಿರತೆ ಕಂಡು ಬಂದಿದೆ, ಬುಧವಾರ ಮದ್ಯಾಹ್ನದ ಪಕ್ಷಿಕೆರೆ ಅಟೋ ಚಾಲಕರಾದ ನಾಗೇಶ್ ಎಂಬುವವರು ಅಟೋದಲ್ಲಿ ಸಂಚರಿಸುತಿರುವಾಗ ಚಿರತೆ ಕಂಡು ಬಂದಿದೆ, ಚಿರತೆ ರಸ್ತೆ ದಾಟಲು ಅನುವಾಗುತ್ತಿದ್ದಾಗ, ಅಟೋ ಕಂಡು ಹಿಂದೆ ಓಡಿ ಹೋಗಿದೆ,
ವಾರದ ಹಿಂದೆ ಇದೇ ಹಾಲಿನ ಸೊಸೈಟಿ ಬಳಿ ಚಿರತೆ ಹೆಜ್ಜೆ ಗುರುತು ಅಲ್ಲದೆ ರಾತ್ರಿ ಬೈಕ್ ನಲ್ಲಿ ಸಂಚರಿಸುವವರಿಗೆ ಚಿರತೆ ಕಂಡು ಬಂದಿದ್ದು, ಸ್ಥಳೀಯ ಜನತೆ ಭಯಭೀತರಾಗಿದ್ದರು, ಇದೀಗ ಹಾಡುಹಗಲೇ ಚಿರತೆ ಕಂಡು ಬಂದ ನಂತರ ಸಾರ್ವಜನಿಕರು ಮತ್ತಷ್ಟು ಭಯಬೀತರಾಗಿದ್ದಾರೆ, ರೈತರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಹೆಚ್ಚಾಗಿ ಸಂಚರಿಸುತ್ತಿದ್ದು,
ಅರಣ್ಯ ಇಲಾಖೆ ಈ ಬಗ್ಗೆ ಆದಷ್ಟು ಬೇಗ ಗಮನಹರಿಸಬೇಕಾಗಿದೆ

