ಕಿನ್ನಿಗೋಳಿ: ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಏಳಿಂಜೆ ಯೋಗೀಶ್ ರಾವ್ ನಿಧನ

0
160

ಮುಲ್ಕಿ: ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಯೋಗೀಶ್ ರಾವ್ (85) ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
ಅವರು ಸರಕಾರಿ ಸೇವೆಯ ಡೆಪ್ಯೂಟಿ ತಹಶೀಲ್ದಾರ್ ವೃತ್ತಿಯನ್ನು ನಡೆಸಿ ನಿವೃತ್ತಿ ಹೊಂದಿದ್ದರು, ಏಳಿಂಜೆ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ಟ್ರಸ್ಟಿಯಾಗಿ, ದೇವಸ್ಥಾನದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದ್ದರು.
ಪ್ರತಿಷ್ಠಿತ ಐಕಳಬಾವ ಕಾಂತಾ ಬಾರೆ ಬೂದಾ ಬಾರೆ ಕಂಬಳ ಸಮಿತಿಯ ಪದಾಧಿಕಾರಿಯಾಗಿ, ಅಂತರಾಷ್ಟ್ರೀಯ ಲಯನ್ಸ್ ಸಹಿತ ಅನೇಕ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದರು.
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,ಏಳಿಂಜೆ ದೇವಸ್ಥಾನದ ಆಡಳಿತ ಅನುವಂಶಿಕ ಅರ್ಚಕ ಗಣೇಶ್ ಭಟ್, ಆಡಳಿತ ಮೊಕ್ತೇಸರ ಕೋoಜಾಲುಗುತ್ತು ಪ್ರಭಾಕರ ಶೆಟ್ಟಿ,ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಐಕಳ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ, ಪದಾಧಿಕಾರಿಗಳಾದ ಚಿತ್ತರಂಜನ್ ಭಂಡಾರಿ, ಸ್ವರಾಜ್ ಶೆಟ್ಟಿ, ಐಕಳ ಗ್ರಾ ಪಂ ಅಧ್ಯಕ್ಷ ದಿವಾಕರ ಚೌಟ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಲ.ಕಿಶೋರ್ ಶೆಟ್ಟಿ ಬಪ್ಪನಾಡು,ಕಿನ್ನಿಗೋಳಿi ರೋಟರಿ ಕ್ಲಬ್ ಅಧ್ಯಕ್ಷ ಸಾಯಿನಾಥ ಶೆಟ್ಟಿ ಮುಂಡ್ಕೂರು, ಶರತ್ ಶೆಟ್ಟಿ, ಸಂಕಲಕರಿಯ, ಸುಧಾಕರ್ ಸಾಲ್ಯಾನ್, ಉದಯಕುಮಾರ್ ಶೆಟ್ಟಿ ಅಧಿಧನ್ ಮುಲ್ಕಿ,ಭಾನುಮತಿ ಶೆಟ್ಟಿ ಕಕ್ವಗುತ್ತು, ಶರತ್ ಕಾರ್ನಾಡ್ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here