ಕಿನ್ನಿಗೋಳಿ: ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ ನಿ. ಮಂಗಳೂರು ಇದರ ಕಿನ್ನಿಗೋಳಿ ಶಾಖೆಯು 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಹಕರೊಂದಿಗೆ ಒಂದು ದಿನ ಕಾರ್ಯಕ್ರಮದ ಪ್ರಯುಕ್ತ ಗಣಹೋಮ ಮತ್ತು ಲಕ್ಶ್ಮೀ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಕರುಣ್ ರಾವ್ ಬೆಳ್ಳೆ, ನಿರ್ದೇಶಕರಾದ ಶ್ರೀಕಾಂತ್ ರಾವ್, ರಾಘವೇಂದ್ರ ರಾವ್, ನಾಗರಾಜ ರಾವ್, ಉದಯಕುಮಾರ್ ರಾವ್ ಹಾಗೂ ಮುಖ್ಯಕಾರ್ಯನಿರ್ವಾಹಕರಾದ ಸಾಯಿಪ್ರಸಾದ್, ಹಿರಿಯ ವ್ಯವಸ್ಥಾಪಕರಾದ ಲೋಕೇಶ್ ಮತ್ತು ಪ್ರಕಾಶ್ ರೈ ಇವರು ಉಪಸ್ಥಿತರಿದ್ದರು. ಹೆಚ್ಚಿನ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ವಿಶೇಷವಾಗಿ ಉತ್ತಮ ಠೇವಣಿ ದಾರರಿಗೆ ಕಿರುಕಾಣಿಕೆ ನೀಡಲಾಯಿತು.
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ