ಕಿನ್ನಿಗೋಳಿ : ಟೈಲರ್ಸ್ ಅಸೋಸಿಯೇಷನ್ ಮಹಾಸಭೆ

0
98

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜೂನ್ 22 ರಂದು ಟೈಲರ್ಸ ಅಸೋಸಿಯೇಷನ್ ಮಹಾಸಭೆ ಜರುಗಿತು. ಈ ಸಂದರ್ಭದಲ್ಲಿ ಕಂಡುಬಂದ ಮೆಚ್ಚುಗೆಯ ವಿಷಯವೇನೆಂದರೆ ಎಲ್ಲರಿಗೂ ಮಾದರಿಯಾಗುವಂತೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ನಡೆದುದು. ಜಗ್, ಲೋಟದಲ್ಲಿ ನೀರು, ಊಟದಲ್ಲಿ ಸ್ಟೀಲ್ ಲೋಟ, ಪಾತ್ರೆ, ಅತಿಥಿಗಳಿಗೆ ಗಿಡಗಳೇ ಸ್ಮರಣಿಕೆ, ಇಂತಹ ಸಮಾಜಮುಖಿ, ಶೂನ್ಯ ತ್ಯಾಜ್ಯ ಕ್ರಮಕ್ಕೆ, ಶ್ರಮಕ್ಕೆ ಮೂಲ, ಮುಖ್ಯ ಕಾರಣ ಮೂಡುಬಿದಿರೆಯ ಸಂಧ್ಯಾ ಜೈನ್ ಇವರ ಈ ಪರಿಶ್ರಮವನ್ನು ಎಲ್ಲರೂ ಮುಕ್ತಕಂಠದಿಂದ ಹೊಗಳಿದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here