ಬೆಳ್ತಂಗಡಿ : ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಇದರ ಗೌರವ ಸಲಹೆಗಾರರಾಗಿ ಧಾರ್ಮಿಕ ಮುಖಂಡರು ಆಗಿರುವ ಕಿರಣ್‌ಚಂದ್ರ ಡಿ.ಪುಷ್ಪಗಿರಿ ಉರುವಾಲು ಇವರನ್ನು ಆಯ್ಕೆ ಮಾಡಲಾಗಿದೆ.
ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ,ಸಾಹಿತ್ಯ ವೇದಿಕೆಯಾಗಿದ್ದ ಆಮಂತ್ರಣ ಪರಿವಾರ ೧೦ ವರ್ಷದ ಪ್ರಯಾಣದಲ್ಲಿ ನೋಂದಾವಣೆಗೊಂಡಿದ್ದು ಆಮಂತ್ರಣ ಸೇವಾ ಪತಿಷ್ಠಾನ ಆಗಿ ಮುಂದಿನ ದಿನಗಳಲ್ಲಿ
ಮುಂದುವರಿಯಲಿದೆ.
ಈಗಾಗಲೇ ಸಂಸ್ಥೆಯಡಿಯಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯವೇದಿಕೆ ಕರ್ನಾಟಕ ಜಿಲ್ಲೆಯ ಪ್ರತೀ ತಾಲೂಕುಗಳಲ್ಲಿ ಕೆಲಸ ಮಾಡುತ್ತಿದ್ದು ಅನೇಕ ಸಾಹಿತ್ಯ ಸಾಂಸ್ಕೃತಿಕ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡಿದೆ.