ಕಿರಿಮಂಜೇಶ್ವರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ” ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ , ಸಮೃದ್ಧ ಬೈಂದೂರು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ಲಯನ್ಸ್ ಕ್ಲಬ್ ಉಪ್ಪುಂದ , ಜೋಗಿ ಮನೆ ಟ್ರಸ್ಟ್ ಹಳೆಗೇರಿ , ಸರ್ಕಾರಿ ಪ್ರೌಢ ಶಾಲೆ ಕಿರಿಮಂಜೇಶ್ವರ ಇವರುಗಳ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ” ಪ್ರೇರಣಾ 2025″ ಕಾರ್ಯಕ್ರಮ ಸರ್ಕಾರಿ ಪ್ರೌಢಶಾಲೆ ಕಿರಿಮಂಜೇಶ್ವರದಲಿ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಖಾರ್ವಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್ , ಬಿಜೆಪಿ ಮಂಡಲ ಅಧ್ಯಕ್ಷ ಅನಿತಾ ಎಂ.ಜೋಗಿ ಮನೆ ಟ್ರಸ್ಟ್ ನ ವಸಂತ ಜೋಗಿ, ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಅಧ್ಯಕ್ಷ ಅಬ್ದುಲ್ ಮುನಾಫ್, ಸೀನಿಯರ್ ಚೇಂಬರ್ನನ ರಾಷ್ಟ್ರೀಯ ನಿರ್ದೇಶಕೆ ಹುಸೇನ್ ಹೈಕಾಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಭಾಸ್ಕರ್ ಖಾರ್ವಿ ಉಪಸ್ಥಿರಿದ್ದರು.ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಲಯನ್ಸ್ ಸುಂದರ್ ಕೋಟಾರಿ, ರಹಿಮಾನ್,ಕರಾಮಾತುಲ್ಲ, ಮಂಜುನಾಥ್ ನಾಯಕ್
ಸಂಪನ್ಮೂಲ ವ್ಯಕ್ತಿ ಆಗಿ ಸರೋಜಾ ವಲಯ ತರಬೇತುದಾರರು ಉಪಸುರಿದ್ದರು. ಅಕಾಡೆಮಿ ಆಫ್ ಪರ್ಸನಾಲಿಟಿ ಎಕ್ಸೆಲೆನ್ಸ್ ತರಬೇತುದಾರ ಕೆ.ಕೆ.ಶಿವರಾಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವ ಹಿಸಿದರು .ಮುಖ್ಯ ಶಿಕ್ಷಕ ಮಂಜು ಎಂ ಪೂಜಾರಿ ಸ್ವಾಗತಿಸಿ ವಂದಿಸಿದರು ಕಾರ್ಯಕ್ರಮದ ನಿರ್ದೇಶಕರು ಸುಮಾ ಆಚಾರ್ ಪ್ರಾಸವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

