ಸೂಕ್ತ ಪರಿಹಾರ ರೈತರಿಗೆ ನೀಡದೆ ಬಲಾತ್ಕಾರ, ಶೋಷಣೆ ನಡೆಸುತ್ತಿರುವ ಕಂಪನಿಗೆ ಎಚ್ಚರಿಕೆ ನೀಡಿದ- ಕಿಸಾನ್ ಶಾಂತಿಪ್ರಸಾದ್ ಹೆಗ್ಡೆ

0
118

ಮೂಡುಬಿದಿರೆ ತಾಲೂಕು ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿಯ ದಂಬೇಸಾಲ್ ನಲ್ಲಿ ಸ್ಟಾರ್‌ ಲೈಟ್‌ ಕಂಪೆನಿಯವರು ಸಿಕ್ವೇರಾ ಕಾಂಪೌಂಡ್ ನಲ್ಲಿ ಲವೀನಾ ಸೀಕ್ವೇರಾ ಹಾಗೂ ಮನೆಯವರು ಆಸ್ಪತ್ರೆಯಲ್ಲಿ ಇರುವ ಸಮಯವನ್ನು ನೋಡಿಕೊಂಡು ಬಲಾತ್ಕಾರವಾಗಿ ಪ್ರವೇಶಿಸಿ ಫಲಭರಿತ ಮರಗಳನ್ನು ಕಡಿದು, ಹಿಟಾಚಿ ಯನ್ನು ತಂದು ಟವರ್ ನಿರ್ಮಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿ ಹೆದರಿಸಿ, ಸಹಿ ಪಡೆದು, ಅಕ್ರಮವಾಗಿ ಪ್ರವೇಶಿಸಿ ಬಲಾತ್ಕಾರಿಸುತ್ತಿರುವುದು ರೈತರಿಗೆ ಆಘಾತವನ್ನು ಉಂಟುಮಾಡಿದೆ. ಸ್ಟರ್ ಲೈಟ್ ಕಂಪನಿಯವರು ಮೊಟ್ಟಮೊದಲು ಆಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೀಟರ್ ಸಿಕ್ವೇರಾ ಅವರ ವೈಯಕ್ತಿಕ ಖಾತೆಗೆ ಪರಿಹಾರದ ಹಣವನ್ನು ಜಮೆ ಮಾಡಬೇಕು . ಆ ತರುವಾಯ ಯಾವುದೇ ಕೆಲಸವನ್ನು ಮುಂದುವರಿಸುವುದಕ್ಕೆ ರೈತರು ಒಪ್ಪಿಗೆಯನ್ನು ನೀಡುತ್ತೇವೆ ಎಂದು ಭಾರತೀಯ ಕಿಸಾನ್ ಸಂಘದ ಮೂಡುಬಿದರೆ ವಲಯದ ಶಾಂತಿ ಪ್ರಸಾದ್ ಶೆಟ್ಟಿ, ಕಲ್ಲಮುಂಡ್ಕೂರು ಸುಖಾನಂದ ಶೆಟ್ಟಿ, ಅಂಬ್ರೋಸ್, ಗಂಗಾಧರ ಶೆಟ್ಟಿ, ಕೊನಿ ಡಿಸಿಲ್ವ, ಎಚ್ಚರಿಕೆಯನ್ನು ನೀಡಿದರು.
ರೈತರ ಮೇಲೆ ನಡೆಯುವ ಯಾವುದೇ ಬಲಾತ್ಕಾರ, ಶೋಷಣೆಗೆ ನಮ್ಮ ತೀವ್ರ ವಿರೋಧವಿದ್ದು ಯಾವುದೇ ರೀತಿಯ ಪ್ರತಿಭಟನೆಗೆ ಹಿಂಜರಿಯುವುದಿಲ್ಲ ಎಂದು ಕಂಪನಿಗೆ ಎಚ್ಚರಿಕೆಯನ್ನು ನೀಡಿರುತ್ತಾರೆ. ಕಾನೂನಾತ್ಮಕವಾಗಿ ಏನೇ ಮಾಡಿದರು ನಮ್ಮ ಬೆಂಬಲವಿದೆ ಹಾಗೂ ರೈತರಿಗೆ ಸೂಕ್ತವಾದ ಪರಿಹಾರವನ್ನು ಕೊಡಿಸುವ ಅಗತ್ಯವಿದೆ ಎಂದು ನಿಡ್ಡೋಡಿಯಲ್ಲಿ ಸೇರಿದ್ದ 200 ಕ್ಕೂ ಹೆಚ್ಚು ಮಂದಿ ಬೆಂಬಲವನ್ನು ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಪೊಲೀಸ್ ಅಧಿಕಾರಿ ಕೃಷ್ಣಪ್ಪ ಹಾಗೂ ತಂಡದವರು ಮನೆಯವರ ಒಪ್ಪಿಗೆ ಇಲ್ಲದೆ ತಂದು ಹಾಕಿರುವ ಕಂಪೆನಿಯ ಎಲ್ಲ ವಸ್ತುಗಳನ್ನು ಗೇಟಿನ ಬಳಿಯಿಂದ ವರ್ಗಾಯಿಸಲು ತಿಳಿಸಿದರು. ಕಿಸಾನ್ ಸಂಘದ ಪ್ರಮುಖರು ಮನೆಯ ಗೇಟಿಗೆ ಬೀಗವನ್ನು ಜಡಿದು ಅಕ್ರಮ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here