ಕೊಯಿಲ: ವಾರ್ಷಿಕ ಕ್ರೀಡಾಕೂಟ ಕ್ರೀಡಾ ಬಹುಮಾನ ಪೀಠ ಹಸ್ತಾಂತರ

0
20

ಬಂಟ್ವಾಳ: ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ  ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ  ಸೈನಿಕ ಶ್ರೀಧರ್ ಅಂಚನ್ ಪಂಜಿಕಲ್ಲು ಚಾಲನೆ ನೀಡಿದರು.
ಪ್ರತೀ ವರ್ಷ ಶಾಲೆಯಿಂದ ಕನಿಷ್ಠ ಒಬ್ಬರಾದರೂ ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಮೂಲಕ ಶಾಲೆಗೆ ಕೀರ್ತಿ ತರುವುದರ ಜೊತೆಗೆ ದೇಶದ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಶಿವಪ್ರಸಾದ್ ಶೆಟ್ಟಿ, ಗ್ರಾ. ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಪ್ರಮುಖ ರಾದ ಲ್ಯಾನ್ಸಿ ಕುವೆಲ್ಲೋ, ರಾಜೇಶ್ ಜೈನ್ ಪಡ್ರಾಯಿ ಮತ್ತಿತರರು ಶುಭ ಹಾರೈಸಿದರು.
ಇದೆ ವೇಳೆ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ  ಕ್ರೀಡಾ ‘ಬಹುಮಾನ ಪೀಠ’ ವನ್ನು ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ಹಸ್ತಾಂತರಿಸಿದರು.

ಮುಖ್ಯ ಶಿಕ್ಷಕಿ ಸೌಜನ್ಯ ಸ್ವಾಗತಿಸಿ,  ದೈಹಿಕ ಶಿಕ್ಷಣ ನಿರ್ದೇಶಕ ಜನಾರ್ಧನ್ ವಂದಿಸಿದರು.  ಶಿಕ್ಷಕಿಯರಾದ ಸೌಮ್ಯಾ ಎಚ್. ಮತ್ತು ಜ್ಯೋತಿ ಕಾರ್ಯಕಮ ನಿರೂಪಿಸಿದರು.

LEAVE A REPLY

Please enter your comment!
Please enter your name here