ಕೊಕ್ರಾಡಿ: ಪರಿಸರ ಜಾಗೃತಿ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ

0
129

ಕೊಕ್ರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. BC ಟ್ರಸ್ಟ್ (ರಿ) ಗುರುವಾಯನಕೆರೆ, ನಾರಾವಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಕ್ರಾಡಿ-ಸಾವ್ಯ ಹಾಗೂ ಸರಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕೊಕ್ರಾಡಿ ಇವುಗಳ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ಕೊಕ್ರಾಡಿ ಪ್ರೌಢಶಾಲೆಯಲ್ಲಿ ಜರಗಿತು.

ತಾಲೂಕು ಜನಜಾಗ್ರತಿ ವೇದಿಕೆ ಸದಸ್ಯರಾದ ರಾಜು ಪಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಮುಂದಿನ ಪೀಳಿಗೆಯ ನೆಮ್ಮದಿ ಜೀವನಕ್ಕೆ ಪರಿಸರ ಸಂರಕ್ಷಣೆ ಅತೀ ಮುಖ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಲಯದ ಮೇಲ್ವಿಚಾರಕಿ ವಿಶಾಲ ಕೆ.ರವರು, ಯೋಜನೆ ನಡೆದು ಬಂದ ದಾರಿ, ಯೋಜನೆಯಿಂದ ಸಿಗುವ ಸೌಲಭ್ಯದ ಬಗ್ಗೆ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ದಯಾನಂದ್ ರವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ, ಪ್ರಾಣಿ ಪಕ್ಷಿ ಗಳಿಗೆ ಎಲ್ಲಾ ಸಮಯದಲ್ಲಿ ಆಹಾರ ಸಿಗುವ ರೀತಿಯಲ್ಲಿ ನಾವು ಹೆಚ್ಚು ಹೆಚ್ಚು ಗಿಡ ನಾಟಿ ಮಾಡಬೇಕು , ಎಲ್ಲಾ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದಿನದಂದು ಗಿಡ ನಾಟಿ ಮಾಡುವಂತೆ ಸಲಹೆಯಿತ್ತರು.

ಪರಿಸರ ಸಂರಕ್ಷಣೆ ಕುರಿತಂತೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ csc ನೋಡಲ್ ಅಧಿಕಾರಿ ಸುರೇಶ ರವರು ಸಾಮಾನ್ಯ ಸೇವಾ ಕೇಂದ್ರ ದಲ್ಲಿ ಸಿಗುವ ಸೇವೆ ಗಳ ಬಗ್ಗೆ ಮಾಹಿತಿ ನೀಡಿದರು. ಈ ಸಭಾ ಕಾರ್ಯಕ್ರಮ ದಲ್ಲಿ ಕೃಷಿ ಮೇಲ್ವಿಚಾರಕರು ಕೃಷ್ಣ, ಶಾಲಾ ಮುಖ್ಯ ಶಿಕ್ಷಕರು ಮೊಹಮ್ಮದ್ ರಿಯಾಜ್, ಕೊಕ್ರಾಡಿ ಮತ್ತು ಸಾವ್ಯ ಒಕ್ಕೂಟದ ಅಧ್ಯಕ್ಷರುಗಳಾದ, ವಾರಿಜ, ಯಮುನಾ, ಸೇವಾ ಪ್ರತಿನಿಧಿ ಶಶಿಧರ ಕೆ. ಕುಲಾಲ್, ನಾರಾವಿ ವಲಯದ ಶೌರ್ಯ ವಿಪತ್ತು ಘಟಕದ ಸಂಯೋಜಕರು ಹರಿಣಾಕ್ಷಿ, ದಿನೇಶ್ ಶೆಟ್ಟಿ ಸಂತೋಷ್ ಪೂಜಾರಿ, ಅಣ್ಣಿ m.k ರಾಜು ಪೂಜಾರಿ, ಕರಿಯ ಪೂಜಾರಿ, ಹರೀಶ್ ಕಾರ್ಯಕ್ರಮ ನಿರೂಪಣೆಯನ್ನು ಅಕ್ಕಮ್ಮ ಯೋಗ ಮತ್ತು ಕನ್ನಡ ಶಿಕ್ಷಕರು ಮಾಡಿದರು ,ಶಾಲಾ ಅಧ್ಯಾಪಕಿ ಲವೀನಾ ವೀಣಾ ಡಯಾಸ್ ಸ್ವಾಗತಿಸಿ , ಸಹ ಶಿಕ್ಷಕಿ ವಿದ್ಯಾ ಧನ್ಯವಾದ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು , sdmc ಸದಸ್ಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here