ಕೊಕ್ರಾಡಿ: ಬೋನಿಗೆ ಬಿದ್ದ ಚಿರತೆ, ಗ್ರಾಮಸ್ಥರು ನಿಟ್ಟುಸಿರು!

0
138

ವೇಣೂರು: ಕಾಡು ಬಿಟ್ಟು ನಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಕೊಕ್ರಾಡಿ, ಅಂಡಿಂಜೆ ಪರಿಸರದಲ್ಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡು ಜನರನ್ನು ಭಯ ಭಯಭೀತರನ್ನಾಗಿಸಿತ್ತು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಅಳವಡಿಸಿದ್ದರು.
ವೇಣೂರು ಸನಿಹದ ಕೊಕ್ರಾಡಿ ಸೂರ್ಯನಾರಾಯಣ ಡಿ.ಕೆ. ಅವರ ಮನೆ ಬಳಿ ಅಳವಡಿಸಿದ್ದ ಬೊನ್ ಗೆ ಚಿರತೆ ಬಿದ್ದಿದೆ. ಸುದ್ದಿ ತಿಳಿದು ಸುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here