“ಗುರು ಎಂದರೆ ವ್ಯಕ್ತಿಯಲ್ಲ, ಶಕ್ತಿ. ಆದುದರಿಂದಲೇ ‘ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ’ ಎಂದು ಪ್ರಾಜ್ಞರು ಹೇಳಿದ್ದರು. ತ್ರಿಮೂರ್ತಿಗಳ ಶಕ್ತಿ ಆ ವ್ಯಕ್ತಿಯಲ್ಲಿರುವುದರಿಂದಲೇ ಗುರು ಎಂದು ಕರೆಯಲ್ಪಡುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ ಬೇಕು, ಹಿಂದಿನಿಂದ ಗುರುವಿನ ಮಾರ್ಗದರ್ಶನ ಬೇಕು. ಪುರಂದರದಾಸರು ಹೇಳದಂತೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು. ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅವಶ್ಯವಿದೆ ಎಂದು ಬೋಲ್ಡನ್ ಕುಟುಂಬ ಪಂಚಾಂಗ ಸೇವಾ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಕೆ .ಎನ್ ರಮೇಶ್ ಅವರು ಶ್ರೀ ಗುರೂಜಿಯನ್ನು ಸನ್ಮಾನಿಸಿ ನುಡಿದರು.
ಅಂತೆಯೇ ಜಡತ್ವದಿಮದ ಕೂಡಿದ ಈ ಸ್ಥಳದಲ್ಲಿ ಚೈತನ್ಯ ನೆಲೆಯಾಗಿದೆ. ಇಂತಹ ಚೈತನ್ಯ ಶಕ್ತಿ ನೀಡಿದ ರಮಾನಂದ ಗುರೂಜಿಯವರ ಮಾರ್ಗದರ್ಶನದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರಿದೆ.. ನಾಗದೋಷದಿಂದ ಕಂಗಾಲಾಗಿರುವ ಇನ್ನಷ್ಟು ಕುಟುಂಬಗಳಿಗೆ ರಮಾನಂದ ಗುರೂಜಿಯವರ ಮಾರ್ಗದರ್ಶನ ಸಿಗುವಂತಾಗಲಿ ಎಂದರು.
ಸನ್ಮಾನ ಪತ್ರವನ್ನು ಊರಿನ ಹತ್ತು ಸಮಸ್ತರು ಹಾಗೂ ಗಣ್ಯರ ಸಮಕ್ಷಮದಲ್ಲಿ ಟ್ರಸ್ಟಿನ ಸದಸ್ಯರು ಹಾಗೂ ಎಲ್ಐಸಿ ಅಭಿವೃದ್ಧಿ ಅಧಿಕಾರಿ ದಿನೇಶ್ ಓದಿ ಗುರೂಜಿಯವರನ್ನು ಅಭಿನಂದಿಸಿದರು.. ಟ್ರಸ್ಟ್ ನ ಅಧ್ಯಕ್ಷರಾದ ಪದ್ಮನಾಭ ಜೆ ಅನಂತಾಡಿ ಪ್ರಧಾನ ಕಾರ್ಯದರ್ಶಿಯಾದ ಪದ್ಮನಾಭ ಮಡಿವಾಳ್, ಪಟ್ಟೋರಿ ಶ್ರೀ ನಾಗಬ್ರಹ್ಮ ದೇವಸ್ಥಾನ ಕೊಣಜಿ ಯುವಕ ಮಂಡಲ ಅಸೈಗೋಳಿ, ಮೊಸರು ಕುಡಿಕೆ ಉತ್ಸವ ಸಮಿತಿ, ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘ (ರಿ) ಇದರ ಅಧ್ಯಕ್ಷರು ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಫುಲ್ಲು ಇವರು ಉಪಸ್ಥಿತರಿದ್ದರು.
ದೃಢ ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಗುರೂಜಿ ಮಾರ್ಗದರ್ಶನದಂತೆ ನೆರವೇರಿತು.. ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಉಸ್ತುವಾರಿ ಕುಸುಮ ನಾಗರಾಜ್, ಉದ್ಯಮಿ ಆನಂದ ಬಾಯರಿ ಉಪಸ್ಥಿತರಿದ್ದರು.