ಕೋಟ ಬ್ರಹ್ಮಾವರ ಇಲ್ಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೂಟತಟ್ಟು ಗ್ರಾಮ ಪಂಚಾಯಿತಿ ಉಸಿರು ಸಂಸ್ಥೆ ಕೋಟ ತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ಐದನೇ ವರ್ಷದ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರೌಢ ವಿಭಾಗಕ್ಕೆ ಅಮೃತ ಭಾರತಿ ವಿದ್ಯಾ ಕೇಂದ್ರದ 9ನೇ ತರಗತಿ ವಿದ್ಯಾರ್ಥಿ ಶ್ರೀ ಕೃಷ್ಣ ಪ್ರಸಾದ್ ಭಟ್ ಇವನು ಆಯ್ಕೆಯಾಗಿದ್ದು , ಕೋಟ ಶಿವರಾಮ ಕಾರಂತ ಥೀಮ್ ಪಾರ್ಕಿನಲ್ಲಿ ಸನ್ಮಾನಿಸಲಾಗಿದೆ.
ಇವನು ಹೆಬ್ರಿ ಅಮೃತ ಭಾರತಿ ವಿದ್ಯಾಕೇಂದ್ರದ ಸಿಬಿಎಸ್ಸಿ ವಿಭಾಗದ 9ನೇ ತರಗತಿ ವಿದ್ಯಾರ್ಥಿ .ಶಾಲಾ ಸಹ ಶಿಕ್ಷಕಿ ಅಂಬಿಕಾ ರವರ ಸುಪುತ್ರ. ನೂರಾರು ಬಹುಮಾನಗಳನ್ನು ಈಗಾಗಲೇ ಮುಡಿಗೇರಿಸಿಕೊಂಡಿರುವ ಈ ಪ್ರತಿಭೆಯನ್ನು ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು, ಸದಸ್ಯರು ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

