ಕೊಯ್ಯೂರು ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

0
20

ಕೊಯ್ಯೂರು :ಭಾರತೀಯ ಜನತಾ ಪಾರ್ಟಿ ಕೊಯ್ಯೂರು ಶಕ್ತಿ ಮಂಡಲ ಇದರ ಅಭ್ಯಾಸ ವರ್ಗ ಕಾರ್ಯಕ್ರಮ ಸೆ 08 ರಂದು ಕೊಯ್ಯೂರಿನ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು.ದಾಮೋದರ ಗೌಡ ಬೆರ್ಕೆ ಇವರು ಸ್ವಾಗತಿಸಿ,ಪಕ್ಷದ ಹಿರಿಯ ಕಾರ್ಯಕರ್ತರಾದ ಪ್ರಚಂಢಭಾನು ಭಟ್ ಪಾಂಬೇಲು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.. ಈ ವೇಳೆ ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯವರಾದ ಉಮೇಶ್ ಕುಲಾಲ್, ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ ಹಾಗೂ ಶಕ್ತಿ ಕೇಂದ್ರ ಪ್ರಮುಖರಾದ ತಾರಾನಾಥ ಗೌಡ ಮೇಗಿನಬಜಿಲ ಇವರುಗಳು ಉಪಸ್ಥಿತರಿದ್ದರು.. ಮೂರು ಅವಧಿಗಳಲ್ಲಿ ನಡೆದ ಈ ಅಭ್ಯಾಸ ವರ್ಗವನ್ನ ಕ್ರಮವಾಗಿ ಯತೀಶ್ ಪಣೆಕ್ಕರ, ಮಹಾಬಲ ಗೌಡ ಬಂದಾರು ಹಾಗು ಸುಧಾಕರ್ ಲಾಯಿಲ ಇವರುಗಳು ನಡೆಸಿಕೊಟ್ಟರು..

ಅಭ್ಯಾಸ ವರ್ಗದ ಸಮಾರೂಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು ಪಕ್ಷ ಬೆಳೆದು ಬಂದ ಹಾದಿಯ ಬಗ್ಗೆ ಸ್ಪೂರ್ತಿದಾಯಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ವಸಂತಿ ಮಚ್ಚಿನ, ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾದ ಗೀತಾ ರಾಮಣ್ಣ ಗೌಡ, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ದಯಾಮಣಿ ಮಲೆಬೆಟ್ಟು, ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿಯವರಾದ ಪ್ರಶಾಂತ್ ಪಾರೆಂಕಿ ಇವರುಗಳು ಉಪಸ್ಥಿತರಿದ್ದರು..

ಅಭ್ಯಾಸ ವರ್ಗದಲ್ಲಿ ಗ್ರಾ.ಪಂಚಾಯತ್ ಸದಸ್ಯರುಗಳು, ಕೊಯ್ಯೂರು ಸಹಕಾರಿ ಸಂಘದ ಬ್ಯಾಂಕ್ ನ ನಿರ್ದೇಶಕರುಗಳು, ಕೊಯ್ಯೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳು, ಹಾಗೂ ನೂರಾರು ಕಾರ್ಯಕರ್ತರುಗಳು ಭಾಗಿಯಾಗಿದ್ದರು.. ಕಾರ್ಯಕ್ರಮವನ್ನು ಭರತ್ ಡೆಂಬುಗ ನಿರೂಪಿಸಿದರು..

LEAVE A REPLY

Please enter your comment!
Please enter your name here