ಕೆಪಿಎಸ್ ಪ್ರೌಢಶಾಲೆ ಬೆಳ್ಳಾರೆ ಗ್ರಾಹಕ ಮಾಹಿತಿ ಶಿಬಿರ

0
28

ವರದಿ ರಾಯಿ ರಾಜ ಕುಮಾರ

ದ.ಕ.ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆ ಕೆ.ಪಿ.ಎಸ್.ಪ್ರೌಢಶಾಲೆ ಇಲ್ಲಿ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಹರ್ಷ ಜೋಗಿಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜಾಗೃತ ಗ್ರಾಹಕ ಕ್ಲಬ್ ಮಾಹಿತಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗ್ರಾಹಕ ಕಾಯಿದೆ ಮತ್ತು ಇತರ ಕಾಯ್ದೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ನೋಟರಿ ವಕೀಲ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಇವರು ವಿದ್ಯಾರ್ಥಿಗಳಿಗೆ ಗ್ರಾಹಕ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಪಿ.ಎನ್. ಭಟ್. ರವರು ಆಹಾರ ಕಲಬೆರಕೆ ಪತ್ತೆ ಹಚ್ಚುವಿಕೆ ಪ್ರಾತ್ಯಕ್ಷತೆಯೊಂದಿಗೆ ವಿವರಿಸಿದರು. ದ. ಕ. ಜಿಲ್ಲಾ ಗ್ರಾಹಕ ಒಕ್ಕೂಟದ ಕಾರ್ಯದರ್ಶಿ ಡಿ.ಆರ್ ಸುನಂದ ದಂಬೆಕೋಡಿ ಗ್ರಾಹಕ ಮಾಹಿತಿ ಕೇಂದ್ರ ಮತ್ತು ಗ್ರಾಹಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಹಿರಿಯ ಶಿಕ್ಷಕಿ ಮಿಯ್ಯಗೆ ಸ್ವಾಗತಿಸಿದರು. ಶಾಲಾ ಅಧ್ಯಾಪಕ ವೃಂದ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಲಬ್ಬಿನ ಸಂಚಾಲಕ ಶಿಕ್ಷಕ ಪುರಂದರ ಕಾರ್ಯಕ್ರಮ ಸಂಘಟಿಸಿದ್ದರು.
.

LEAVE A REPLY

Please enter your comment!
Please enter your name here