ಮೂಡುಬಿದಿರೆ ಕಲ್ಸಂಕದ ಗೋಪಾಲಕೃಷ್ಣ ದೇವಾಲಯದ 109 ನೇ ವರ್ಷದ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 15ರಂದು, ಮೊಸರು ಕುಡಿಕೆ ಆಗಸ್ಟ್ 16ರಂದು ನಡೆಯಿತು. ದೇವಾಲಯದಿಂದ ಹೊರಟ ಶೋಭಾಯಾತ್ರೆಯಲ್ಲಿ ಸಾಂಪ್ರದಾಯಿಕ ಭಜನಾ, ಕುಣಿತ ಭಜನೆ ತಂಡಗಳು, ಹುಲಿವೇಷ, ಚಂಡೆ, ಕರಗ, ಇತ್ಯಾದಿ ಇದ್ದುವು.
1917ರಲ್ಲಿ ವೇಣೂರು ಕೃಷ್ಣಯ್ಯ ರವರು ಪ್ರಾರಂಭಿಸಿದ ವಿನೂತನ ಯಕ್ಷಗಾನೀಯ ಶೈಲಿಯಲ್ಲಿ ಮೊಸರು ಕುಡಿಕೆ ಉತ್ಸವದಲ್ಲಿ ಮೂರನೇ ತಲೆಮಾರಿನ ಮಳಲಿ ಚಂದ್ರಶೇಖರ ಶ್ರೀ ಕೃಷ್ಣ ವೇಷಧಾರಿಯಾಗಿ ಅಷ್ಟೂ ಮಡಕೆಗಳನ್ನು ಒಡೆದರು.
ದೇವಾಲಯದ ಅನುವಂಶಿಕ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಧಾರ್ಮಿಕ ಕಾರ್ಯಗಳನ್ನು ಸಂಘಟಿಸಿದರು. ಅಜಿತ್ ಪೂಜಾರಿ ಹುಲಿವೇಷ, ಕುಣಿತ ಭಜನೆ ತಂಡಗಳನ್ನು ಸಂಯೋಜಿಸಿದರು. ಚಂಡೆ ಸೇವೆಯನ್ನು ಪವರ್ ಫ್ರೆಂಡ್ಸ್, ನಾಸಿಕ್ ಬ್ಯಾಂಡ್ ನ್ನು ಸರ್ವೋದಯ ಫ್ರೆಂಡ್ಸ್ ಸಿದ್ಧಗೊಳಿಸಿದ್ದರು. ಸಾಂಸ್ಕೃತಿಕ ಕಲಾಪಗಳನ್ನು ಶ್ರೀ ಕೃಷ್ಣ ಫ್ರೆಂಡ್ಸ್, ನ್ಯೂ ಸೆಂಟ್ರಲ್ ಫ್ರೆಂಡ್ಸ್, ಜವನೆರ್ ಬೆದ್ರ ಸಂಘಟನೆಯು ಹಮ್ಮಿಕೊಂಡಿದ್ದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ