“ಕುಡ್ಲ ನಮ್ದು ಊರು” ನಾಳೆ ರಾಜ್ಯಾದ್ಯಂತ ಬಿಡುಗಡೆ: ತುಳುನಾಡಿನಿಂದ ಮತ್ತೊಬ್ಬ ಭರವಸೆಯ ನಾಯಕ ನಟ ನಾಡಿಗೆ ಪರಿಚಯ

0
187

ಮಂಗಳೂರು: ಕೃತಾರ್ಥ ಪ್ರೊಡಕ್ಷನ್ ನಿರ್ಮಾಣದ ನೂತನ ಚಲನಚಿತ್ರ, ಕುಡ್ಲ ನಮ್ದು ಊರು ಸೆ. 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ರಾಜ್ಯದ 70 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಪ್ರೀಮಿಯರ್ ಶೋ ಈಗಾಗಲೇ ಮೂರು ಕಡೆ ನಡೆದಿದ್ದು ಜನರ ಪ್ರತಿಕ್ರಿಯೆ ಚೆನ್ನಾಗಿದೆ, ಜನರ ಪ್ರತಿಕ್ರಿಯೆ ಕಂಡು ನಮಗೂ ಭರವಸೆ ಬಂದಿದೆ. ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಮೂಡಿಸಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯಗಳಿಂದ ತಿಳಿದುಬಂದಿದೆ.


ಈ ಚಿತ್ರದಲ್ಲಿ ಮನುಷ್ಯನ ಜೀವನದ ಮೂರು ಹಂತಗಳು ಹಾಗೂ ಪರಶುರಾಮ ಸೃಷ್ಟಿಯ ತುಳುನಾಡಿನ ಬಗ್ಗೆ ಈ ಹಾದಿಯಲ್ಲಿ ಏನೆಲ್ಲ ಸವಾಲುಗಳು ಬರುತ್ತದೆ ಎಂಬುದು ಈ ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿದ್ದು ಪ್ರೇಕ್ಷಕರಿಗೆ ಕೊನೆಯವರೆಗೂ ಕುತೂಹಲವನ್ನಿರಿಸಿಕೊಂಡು ಮುಂದುವರಿಯುತ್ತದೆ. ಚಿತ್ರವನ್ನು ಕೃತಾರ್ಥ ಪ್ರೊಡಕ್ಷನ್ ನಿರ್ಮಿಸಿದೆ.
ಅಂಕಿತ ಪದ್ಮ, ಚಿತ್ರಾ ಗೌಡ, ನರೇಂದ್ರ ಜೈನ್ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ನಾಯಕ ನಟರುಗಳಾಗಿ ಅಲೋಕ್, ಸ್ವರಾಜ್ ಶೆಟ್ಟಿ, ಲಂಚುಲಾಲ್ ಕೆ ಎಸ್ ನಟಿಸಿದ್ದಾರೆ.
ನಾಯಕ ನಟಿಯರುಗಳಾಗಿ ಅನಿಕಾ ಶೆಟ್ಟಿ, ಶ್ರೇಯಾ ಶೆಟ್ಟಿ, ನಯನ ಸಾಲಿಯನ್ ಅಭಿನಯಿಸಿರುತ್ತಾರೆ.

ತಾರಾಗಣದಲ್ಲಿ ಪ್ರಕಾಶ್ ತೂಮಿನಾಡು, ದಿಲೀಪ್ ಕಾರ್ಕಳ, ಪ್ರಜ್ವಲ್ ಪ್ರಶಾಂತ್, ಮಂಜು ಸುವರ್ಣ, ಮತ್ತಿತರರು ಇದ್ದಾರೆ. ನಿರ್ದೇಶನ ದುರ್ಗಾ ಪ್ರಸಾದ್ ಆರ್ ಕೆ (ಅಲೋಕ್), ನಿರ್ವಹಿಸಿದ್ದಾರೆ.
ಕ್ಯಾಮೆರಾ ಮಯೂರ್ ಶೆಟ್ಟಿ ನಿರ್ವಹಿಸಿದ್ದು. ನಿಶ್ಚಿತ್ ಪೂಜಾರಿ ಸಂಕಲನ ಮಾಡಿದ್ದಾರೆ. ಶ್ರೀ ಸಾಸ್ತ ಸಂಗೀತ ನಿರ್ದೇಶನದಲ್ಲಿ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಹಿನ್ನೆಲೆ ಸಂಗೀತವೂ ಅದ್ಭುತವಾಗಿದೆ. ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಶನ್ ಮೂಡಿಸಿವೆ.

ದುರ್ಗಾ ಪ್ರಸಾದ್ ಆರ್ ಕೆ (ಅಲೋಕ್) ನಿರ್ದೇಶಕರು ಹಾಗೂ ನಾಯಕ ನಟರು, ಸಹಕಾರ ಗೀತಾಂಜಲಿ ಸುವರ್ಣ , ಸುರೇಶ್ ಪಿ ಬಿ ವಕೀಲರು ಮೂಡುಬಿದಿರೆ, ಮಯೂರ್ ಆರ್ ಶೆಟ್ಟಿ ಡಿ ಓ ಪಿ, ಯತೀಶ್ ಕದ್ರ: ಸಹಾಯಕ ನಿರ್ದೇಶಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    LEAVE A REPLY

    Please enter your comment!
    Please enter your name here