ವಿಜಯನಗರ ಜಿಲ್ಲೆ ಕೂಡ್ಲಿಗಿ : ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಶಿಫಾರಸನ್ನು ತಕ್ಷಣ ಹಿಂಪಡೆಯುವಂತೆ , ಹಾಗೂ ನ್ಯಾಯ ಮೂರ್ತಿ ನಾಗಮೋಹನ ದಾಸ್ ರವರ ವರದಿ ಅನುಷ್ಠಾನ ತಡೆಗೆ ಆಗ್ರಹಿಸಿ. ಬಂಜಾರು ಸಮುದಾಯದ ಸ್ವಾಮೀಜಿಗಳ ನೇತೃತ್ವ , ಹಾಗೂ ರಾಜ್ಯ ಜಿಲ್ಲೆ ತಾಲೂಕು ಮುಖಂಡರ ನೇತೃತ್ವದಲ್ಲಿ. ಆಗಸ್ಟ್ 20ರಂದು , ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ. ಶ್ರೀ ಸಂತ ಸೇವಾಲಾಲ್ ದೇವಸ್ಥಾನದಿಂದ , ವಿಜಯನಗರ ಜಿಲ್ಲಾಧಿಕಾರಿ ಕಚೇರಿವರೆಗೆ . ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು , ಬಂಜಾರ್ ಸಮುದಾಯದ ಹಿರಿಯರು ಹಾಗೂ ಮುಖಂಡರು ತಿಳಿಸಿದ್ದಾರೆ. ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರಲ್ಲಿ ಆಗಸ್ಟ್ 10ರಂದು , ಶ್ರೀಸಂತ ಸೇವಾಲಾಲ್ ಬಂಜಾರ್ (ಲಂಬಾಣಿ) ಅಭಿವೃದ್ಧಿ ಹಾಗೂ ಶಿಕ್ಷಣಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ. ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರ ಸಮ್ಮುಖದಲ್ಲಿ ಜರುಗಿದ , ಸಭೆಯಲ್ಲಿ ಪಾದಯಾತ್ರೆ ಕುರಿತು ನಿರ್ಣಯಿಸಿ ಪ್ರಕಟಿಸಲಾಗಿದೆ. ಸಭೆಯಲ್ಲಿ ಸಂಘಟನೆ ಅಧ್ಯೢಕ್ಷರಾದ ವಾಸುದೇವ ನಾಯ್ಕ ಮಾತನಾಡಿ. ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕವಾಗಿದ್ದು , ಅದು ನ್ಯಾಯೋಚಿತವಾಗಿಲ್ಲ ಅದನ್ನು ಕೂಡಲೇ ಕೈ ಬಿಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯ ಮೀಸಲಾತಿ ಪರಿಷ್ಕೃರಿಸುವ ಬದಲಿಗೆ , ಈ ಹಿಂದಿನ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದರು. ಅದಕ್ಕಾಗಿ ಭಾರತೀಯ ಬಂಜಾರ ಸಂಘಟನಾ ಸಮಿತಿ , ಕೂಡ್ಲಿಗಿ ತಾಲೂಕು ಮತ್ತು – ಕೊಟ್ಟೂರು ತಾಲೂಕು ಬಂಜಾರ ಸಂಘದ ವತಿಯಿಂದ. ಸಮಾಜದ ಧರ್ಮ ಗುರುಗಳ ನೇತೃತ್ವದಲ್ಲಿ , ಶ್ರೀ ನ್ಯಾಯ ಮೂರ್ತಿ ನಾಗಮೋಹನ್ ದಾಸ್ ಒಳ ಮೀಸಲಾತಿ ವರದಿಯನ್ನು ಸಾರ,- ಸಾಗಟಾಗಿ ತಿರಸ್ಕರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ.

ಆಗಸ್ಟ್ 20 ರಂದು , ಮರಿಯಮ್ಮನಹಳ್ಳಿ ಶ್ರೀ ಸೇವಾಲಾಲ್ ದೇವಸ್ಥಾನದಿಂದ. ವಿಜಯನಗರ ಜಿಲ್ಲಾಧಿಕಾರಿ ಕಚೇರಿ ವರೆಗೆ , ಸ್ವಾಮೀಜಿಗಳ ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ. ಸಾವಿರಾರು ಬಂಜಾರ ಸುದಾಯದವರ ಸಹಭಾಗಿತ್ವದಲ್ಲಿ , ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು. ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ , ಜಿಲ್ಲಾಧಿಕಾರಿಗಳ ಮೂಲಕ ಹಕ್ಕೊತ್ತಾಯ ಪತ್ರ ನೀಡುತ್ತೇವೆ ಎಂದು ತಿಳಿಸಿದರು. ಪಾದಯಾತ್ರೆ ಯಶಸ್ವೀಗೊಳಿಸಲು ಕರೆ ನೀಡಿದ ಸ್ವಾಮೀಜಿಗಳು- ಒಳಮೀಸಲಾತಿ ಜಾರಿ ಸಮಾಜಕ್ಕೆ ಮರಣ ಶಾಸನವಾಗಿದ್ದು , ಅದನ್ನು ಕೈ ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿ. ಸಮಾಜದವತಿಯಿಂದ ಆ 20ರಂದು , ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ . ಕೂಡ್ಲಿಗಿ ಕೊಟ್ಟೂರು ತಾಲೂಕುಗಳ ಎಲ್ಲಾ ತಾಂಡಗಳಿಂದ , ಸಮಜಾದ ಭಾಂದವರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕಿದೆ. ಮತ್ತು ವಿಜಯನಗರ ಜಿಲ್ಲೆಯ ವಿವಿದ ತಾಲೂಕುಗಳ , ಎಲ್ಲಾ ತಾಂಡಗಳಿಂದ ಸಮಾಜದ ಮುಖಂಡರು. ಸಮುದಾಯದ ಪ್ರಮುಖ ಭಾಂದವರು , ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ. ಪಾದಯಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕೆಂದು , ಬಂಜಾರ್ ಸಮುದಾಯದ ಶ್ರೀಗಳು ಈ ಮೂಲಕ ಕರೆ ನೀಡಿದ್ದಾರೆ.
ಸಭೆಯಲ್ಲಿ ಧರ್ಮ ಗುರುಳಾದ ಶ್ರೀ ಸರ್ದಾರ್ ಸೇವಾಲಾಲ್ ಮಹಾರಾಜರು, ಮತ್ತು ಧೂಪದಹಳ್ಳಿ ಶ್ರೀ ಶಿವಪ್ರಕಾಶ್ ಮಹಾರಾಜರು ಸಾನಿಧ್ಯ ವಹಿಸಿದ್ದರು. ಬಂಜಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯ್ಕ್ , ಶಾಮನಾಯ್ಕ್, ಲಾಲಸಿಂಗ್ ನಾಯ್ಕ್ , ಗೋವಿಂದ ನಾಯ್ಕ್, ಟಿ ವೆಂಕಟೇಶ್, ರಾಮ ನಾಯ್ಕ್, ಬಾಲಾಜಿ, ರವಿನಾಯ್ಕ್, ಪಾಂಡು ನಾಯ್ಕ್, ಸುನಿಲ್ ನಾಯ್ಕ್, ಭೀಮಾ ನಾಯ್ಕ್, ರೈತ ಸಂಘದ ಶೇಕು ನಾಯ್ಕ್, ಕೊಟ್ರೇಶ್, ದೂಪಾದಹಳ್ಳಿ ತಾಂಡ ಕೆ.ವೆಂಕಟೇಶ್, ಸೋಮಲಾ ನಾಯ್ಕ್, ಮೋತಿಕಲ್ ತಾಂಡಾದ ನಿವೃತ್ತ ಶಿಕ್ಷಕ ಭೀಮಾ ನಾಯ್ಕ್, ಸುನಿಲ್ ಕುಮಾರ್. ಹನುಮಾನ್ ನಾಯ್ಕ್, ಹಾಗೂ ಎಲ್ಲಾ ತಾಂಡಾಗಳ ಮುಖಂಡರು , ಸಮಾಜದ ವಿವಿದ ಪಕ್ಷಗಳ ಪ್ರಮುಖರು. ಸಮಾಜದ ವಿವಿದ ಜನಪ್ರತಿನಿಧಿಗಳು , ಸಮಾಜದ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

