ವೇಣೂರು: ಮನೆಯೆದುರಿನ ಸಿಟೌಟ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಅಬುಸಾಲಿ ಅವರು ತನ್ನ ದ್ವಿಚಕ್ರ ವಾಹನವನ್ನು ಜು. 8ರಂದು ಮನೆಯ ಸಿಟೌಟ್‌ನಲ್ಲಿ ನಿಲ್ಲಿಸಿ ಮೂಡುಬಿದಿರೆಗೆ ತೆರಳಿದ್ದರು. ಜು.9ರಂದು ಬೆಳಿಗ್ಗೆ ಬಂದು ನೋಡಿದಾಗ ಬೈಕ್ ಕಳವಾಗಿರುವ ವಿಚಾರ ಬೆಳಕಿಗೆ ಬಂದಿದೆ. ರಾತ್ರಿ ಯಾರೋ ಕಳ್ಳರು ಬೈಕನ್ನು ಕಳವುಬೈದಿದ್ದು, ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

