ಕುಕ್ಕೇಡಿ ಗ್ರಾ.ಪಂ.ಮಟ್ಟದ ಬೃಂದಾವನ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

0
157

ಕುಕ್ಕೇಡಿ: ಗ್ರಾಮ ಪಂಚಾಯತ್ ಮಟ್ಟದ ಬೃಂದಾವನ ಸಂಜೀವಿನಿ ಮಹಿಳಾ ಒಕ್ಕೂಟ (ರಿ.) ಇದರ ಮಹಾಸಭೆ ಸೆ. ೨೪ರಂದು ಕುಕ್ಕೇಡಿ ಭಜನಾ ಮಂದಿರ ಬಳಿ ಇರುವ ಸಭಾಭವನದಲ್ಲಿ ಕುಮಾರಿ ಸುಜಾತ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪ್ರಾರ್ಥನೆಯೊಂದಿಗೆ ಆರಂಭಗೊಂಡು LCRP ಚಂದ್ರಿಕಾರವರು ಎಲ್ಲಾ ಗಣ್ಯರನ್ನು ವೇದಿಕೆ ಗೆ ಆಹ್ವಾನಿಸಿ ಸ್ವಾಗತಿಸಿದರು. ವೇದಿಕೆಯಲ್ಲಿರುವ ಒಕ್ಕೂಟದ ಅಧ್ಯಕ್ಷರಾದ ಕುಮಾರಿ ಸುಜಾತ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನಿತಾ ಕೆ, ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಹಾಗೂ BRP -PRI ಶ್ರೀಕಲಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಭಾ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿದರು. M. B. K ಯಾದ ಚೈತ್ರ ರವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. BC ಸಖಿ ಸುರಕ್ಷಾ ಅವರು ಜಮಾ ಮತ್ತು ಖರ್ಚು ಮಂಡಿಸಿದರು. ಅನುಮೋದನೆ ಯನ್ನು ಸಭೆಯಿಂದ ಸಂಜೀವಿನಿ ಚಪ್ಪಾಳೆಯ ಮೂಲಕ ಪಡೆಯಲಾಯಿತು.

ಪಂಚಾಯತ್ ಅಧ್ಯಕ್ಷರು ಎಲ್ಲರನ್ನು ಉದ್ದೇಶಿಸಿ ಶುಭ ಹಾರೈಸಿದರು. ಸಂಜೀವಿನಿ ಎಲ್ಲಾ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜ ದಲ್ಲಿ ಉತ್ತಮ ಸ್ಥಾನ ಕ್ಕೇರಬೇಕು. ಮಹಿಳಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಬಲಿಷ್ಠ ರಾಗಬೇಕು. ಬ್ಯಾಂಕ್ ನಿಂದ ದೊರೆಯುವ ಸಾಲ ಯೋಜನೆ ಗಳನ್ನು ಸಕರಾತ್ಮಕ ವಾಗಿ ಬಳಸಿಕೊಂಡು ಸ್ವ ಉದ್ಯೋಗ ಗಳನ್ನು ಮಾಡುತ್ತ ಸದೃಢಗೊಳ್ಳಬೇಕು ಎಂದು NRLM ಯೋಜನೆ ಯ ಬಗ್ಗೆ ಸವಿಸ್ತಾರವಾದ ಮಾಹಿತಿ ಗಳನ್ನು ವಲಯ ಮೇಲ್ವಿಚಾರಕರು ನೀಡಿದರು. ಹಾಗೂ ಒಕ್ಕೂಟದ ಅಧ್ಯಕ್ಷರು ಎಲ್ಲರನ್ನೂ ಉದ್ದೇಶಿಸಿ ಮಾಸಿಕ ಸಭೆಯ ಬಗ್ಗೆ, CIF ಸಾಲ ಮರುಪಾವತಿಯ ಬಗ್ಗೆ ಅವರ ಅಭಿಪ್ರಾಯವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಹಳ್ಳಿಸಂತೆಯನ್ನು ಆಯೋಜಿಸಲಾಗಿತ್ತು. ನಂತರ BRPಯಾದ ಶ್ರೀಕಲಾ ಅವರುVPRP ಸರ್ವೆ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಸಂಜೀವಿನಿಯ ಧ್ಯೇಯ ಗೀತೆಯನ್ನು ಹಾಡಲಾಯಿತು. ಹಾಗೂ ಈ ಸಭೆಯಲ್ಲಿ ಸ್ವಸ್ತಿಕ್ ಇವರು ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು. LCRP ಜ್ಯೋತಿ , ಪಶು ಸಖಿಯಾದ ಶೃತಿ ಇವರು ಕಾರ್ಯಕ್ರಮವನ್ನು ನಿರೂಪಿಸಿ, MBK ಚೈತ್ರ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

LEAVE A REPLY

Please enter your comment!
Please enter your name here