ಕೈಕಂಬ: ಕೊಳವೂರು, ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ನಡೆಯುತ್ತಿದ್ದು 2026ರ ಫೆಬ್ರವರಿ 21ರಿಂದ 26ರವ ರೆಗೆ ಕ್ಷೇತ್ರದ ತಂತ್ರಿಗಳಾದ ಬಾಸಿತ್ತಾಯ ಸೋಮೇಶ್ವರರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಸದಾಶಿವ ಕಾರಂತರ ಉಪಸ್ಥಿತಿಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿಜ್ಞಾಪನಾ ಪತ್ರದ ಬಿಡುಗಡೆ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ಎ. ಶೆಟ್ಟಿ ದೇವಸ್ಥಾನ ಇತಿಹಾಸ ಮತ್ತು ಪರಂಪರೆ ವಿವರಿಸಿ, ಯಾವುದೇ ಜಾತಿ, ಮತ, ಪಂಥ ಮತ್ತು ಬಡವರು, ಉಳ್ಳವರು ಎಂಬ ಭೇದ ಭಾವವಿಲ್ಲದೇ ಎಲ್ಲರೂ ಸೇರಿ ಯಶಸ್ವಿಯಾಗಿ ಬ್ರಹ್ಮಕಲಶೋತ್ಸವ ನಡೆಯಲು ಸಹಕಾರ ಕೋರಿದರು. ಟ್ರಸ್ಟಿ ಶಾಂತಾ ಅಡ್ಯಂತಾಯ, ನಾರ್ಯ ಗುತ್ತು ಶ್ರೀನಿವಾಸ್ ಶೆಟ್ಟಿ ವಿನಯ ಕಾರಂತ ಕುಪ್ಪೆಪದವು, ಸದಾನಂದ ಶೆಟ್ಟಿ ಕುಲವೂರುಗುತ್ತು, ಸುಭಾಶ್ಚಂದ್ರ ಭಂಡಾರಿ ಕೊರಂಗಳ ಗುತ್ತು, ಮುತ್ತೂರು ಪಂ. ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಉಪಾಧ್ಯಕ್ಷೆ ಸುಷ್ಮಾ ಚಲನಚಿತ್ರ, ಕಲಾ ನಿರ್ದೇಶಕ ಶಶಿಧರ್ ಅಡಪ, ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಪಂಚಾಯತ್ ಸದಸ್ಯ ಸತೀಶ್ ಪೂಜಾರಿ ಬಳ್ಳಾಜೆ, ಶ್ರೀ ನಾರಾಯಣಗುರು ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಶೇಖರ್ ನೇಲ್ಲಚ್ಚಿಲ್, ಹೇಮಲತಾ ಜೈನ್, ಸತ್ಯಸಾರಮಾನಿ ಸೇವಾ ಸಮಿತಿಯ ಈಶ್ವರ್ ಅಟ್ಟೆ ಪದವು, ಶ್ರೀನಿವಾಸ್ ಶೆಟ್ಟಿ ಕಟ್ಟಪುಣಿ, ಕೃಷ್ಣ ಉಪಾಧ್ಯಾಯ, ಭೋಜರಾಜ್ ಜೈನ್, ಪಂ. ಸದಸ್ಯೆ ಪುಷ್ಪಾ ನಾಯ್ಕ್, ಮೋಹನ್ ದಾಸ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಆಳ್ವ ಸ್ವಾಗತಿಸಿ, ಶೇಖರ್ ನೇಲ್ಲಚ್ಚಿಲ್ ವಂದಿಸಿದರು.
