ಪೆರ್ನಾಜೆ:ಬರಹ ಜೇನು ಗಡ್ಡ ಜೇನು ಕೃಷಿಕರಾದ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ ಹಲವಾರು ವರ್ಷಗಳಿಂದ ಜೇನು ಕೃಷಿ ಬರಹದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ ಆದರ್ಶ ಜೇನು ಕೃಷಿ ದಂಪತಿ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ನಾರಾಯಣ್ ರೈ ಕುಕ್ಕುವಳ್ಳಿ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷರಾದ ಎಚ್
ಭೀಮ್ರಾವ್ ವಾಶ್ಟರ್ ಕೋಡಿಪಾಳ, ಸುಳ್ಯ ಪ್ರಶಸ್ತಿ ಪ್ರಧಾನ ಮಾಡಿದರು ಶಾಲು ಮಾಲೆ ಸ್ಮರಣಿಕೆ ಅಭಿನಂದನ ಪತ್ರಗಳನ್ನು ಸನ್ಮಾನಿಸಿ ಗಣ್ಯರ ಸಮ್ಮುಖದಲ್ಲಿ ಆ 3ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು .
ಚಂದನ ಸಾಹಿತ್ಯ ವೇದಿಕೆಯು ತನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ 2025 ಸಭಾ ಕಾರ್ಯಕ್ರಮದಲ್ಲಿ ಛಲ ಮತ್ತು ಹಠ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧನೆಯನ್ನು ಮಾಡಬಹುದೆಂದು ಸನ್ಮಾನ ಸ್ವೀಕರಿಸಿ ಸಂದರ್ಬೋಚಿತವಾಗಿ ಹಿತ ನುಡಿದರು .
ಇವರು ಭಾರತದ ಅತಿ ದೊಡ್ಡ ತೆಂಗು ರೈತ ಸಂಸ್ಥೆ, ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿ (ನೀ) ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯರು , ಚುಟುಕು ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಸಮಿತಿಯ ಸದಸ್ಯರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಸಮಿತಿಯ ಸದಸ್ಯರಾಗಿದ್ದು
ಇದೀಗಾಗಲೇ ದಾವಣಗೆರೆಯಲ್ಲಿ ನಡೆದ ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಸಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾರದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪುತ್ತೂರು ಲಯನ್ಸ್ ಸೇವಾ ಸದನದಲ್ಲಿ ಆರ್‌ಪಿ ಕಲಾ ಸಂಸ್ಥೆಯು ಸಂಸ್ಥೆ ವತಿಯಿಂದ ಗಾನಶಾರದೆ ಗ್ರಾಂಡ್ ಫಿನಾಲೆಯಲ್ಲಿ ಅಂತರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿ ನೀಡಿ ದಂಪತಿಗಳನ್ನು ಗೌರವಿಸಲಾಯಿತು.
ಅಲ್ಲದೆ ಶಾಂತಿ ಟ್ರಸ್ಟ್ (ರಿ) ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ಧ .ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ,ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಪ್ರಕಟವಾಗುವ ಪುಸ್ತಕದಲ್ಲಿ ಕುಮಾರ್ ಪೆರ್ನಾಜೆ ಅನ್ನದ ಮಹತ್ವ ಲೇಖನ ಪ್ರಕಟಗೊಂಡಿದ್ದು ಈ ಲೇಖನಕ್ಕೆ ಸುಳ್ಯ ಶಾಲೆಯಲ್ಲಿ ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿದ್ದು ಮೆಚ್ಚ ತಕ್ಕದ್ದು ಆಗಿದೆ.
ಸಭಾಧ್ಯಕ್ಷತೆಯನ್ನು ಎಚ್ ಭಿಮ್ರಾವ್ ವಾಸ್ಟರ್ ಕೊಡಿಪಾಳ ಅಧ್ಯಕ್ಷರು ಚಂದನ ಸಾಹಿತ್ಯ ವೇದಿಕೆ ಸುಳ್ಯ, ಕಾರ್ಯಕ್ರಮದ ಉದ್ಘಾಟನೆಯನ್ನು ಮೋಹನ್ ನಂಗಾರ್ ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳು ಸುಳ್ಯ, ಕವಿಗೋಷ್ಠಿಯ ಅಧ್ಯಕ್ಷತೆ ಪ್ರಭಾಕರ್ ಶಿಶಿಲ ಹಿರಿಯ ಸಾಹಿತಿಗಳು, ಸಂಚಾಲಕರು ಜೈನ ಸೇವಾಶ್ರಮ ಅಜ್ಜಾವರ ದೇವರ ಕಳೆಯ ಸುಳ್ಯ , ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಘನ ಉಪಸ್ಥಿತಿಯಲ್ಲಿ,
ಹಾ.ಮ ಸತೀಶ್ ಬೆಂಗಳೂರು ಸಾಹಿತಿಗಳು ಕೃತಿ ಬಿಡುಗಡೆ ಮಾಡಿದರು.ಮುಖ್ಯ ಅತಿಥಿಗಳು ಶ್ರೀಮತಿ ಸಾವಿತ್ರಿ ದೊಡ್ಡ ಮನೆ ಐವರ್ನಾಡು, ಪೆರುಮಾಳ್ ಲಕ್ಷ್ಮಣ್, ಸವಿತಾ ಕೋಡಂದೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.