ಉಡುಪಿ: ಸಮುದ್ರ ತೀರದಲ್ಲಿ ಆಟವಾಡುತ್ತಾ ನೀರಿಗೆ ಇಳಿದಿದ್ದ ಪ್ರವಾಸಿ ಯುವಕರ ತಂಡದಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿ, ಓರ್ವ ನಾಪತ್ತೆಯಾಗಿರುವ ಘಟನೆ ಇಂದು ಸಂಜೆ ಕುಂದಾಪುರ ತಾಲೂಕಿನ ಗೋಪಾಡಿ ಟರ್ಕಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ 10 ಜನರ ತಂಡ ಉಡುಪಿಯ ಕುಂದಾಪುರ ತಾಲೂಕಿನ ಗೋಪಾಡಿ ಟರ್ಕಿಗೆ ಪ್ರವಾಸ ಬಂದಿದ್ದು, ಇದರಲ್ಲಿ 7 ಮಂದಿ ಸಮುದ್ರ ನೀರಿಗೆ ಇಳಿದಿದ್ದಾರೆ. ಆಟ ವಾಡುತ್ತಾ ಆಳ ನೀರಿಗೆ ಹೋದ ನಾಲ್ವರು
ಅಲೆಗಳ ಅಬ್ಬರಕ್ಕೆ ನೀರಿನಲ್ಲಿಹೋಗಿದ್ದಾರೆ. ತಕ್ಷಣ ಸ್ಥಳೀಯರು ಇಬ್ಬರು ಯುವಕರನ್ನು ರಕ್ಷಣೆ ಮಾಡಿದ್ದು, ಮತ್ತಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರ, ಅವರ ಮೃತ ದೇಹ ಪತ್ತೆಯಾಗಿದೆ. ಓರ್ವ ಯುವಕ ನೀರಿನಲ್ಲಿ ಕಣ್ಮರೆಯಾಗಿದ್ದು ಹುಡುಕಾಟ ನಡೆಯುತ್ತಿದೆ.

