ಪುತ್ತೂರು: ಓಂ ಶ್ರೀ ಮಂಜುನಾಥಯ ನಮಃ ಶ್ರೀ, ಕ್ಷೇ, ಧ, ಗ್ರಾ,ಯೋಜನೆ ಬಿಸಿ ಟ್ರಸ್ಟ್(ರಿ) ವಿಟ್ಲ ವತಿಯಿಂದ ಶಿಭರಿ ಕುಣಿತ ಮಾಡತಡ್ಕ ಹಾಗೂ ದುರ್ಗಾಪರಮೇಶ್ವರಿ ಭಜನಾ ತಂಡ ಅಜ್ಜಿನಡ್ಕ ಇವರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಸಲಾಯಿತು. ದಿನಾಂಕ 13.7.2025 ರಂದು ದ.ಕ.ಜಿ.ಪಂ. ಹಿ. ಪ್ರಾ ಶಾಲೆ ಚಂದಳಿಕೆ ಇಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ದಕ್ಷಿಣಕನ್ನಡ -2 ಜಿಲ್ಲೆಯ ನಿರ್ದೇಶಕರು ಬಾಬು ನಾಯ್ಕ್ ಇವರು ಸಂಘವು ಬೆಳೆದು ಬಂದ ದಾರಿ ಸಂಘದಲ್ಲಿ ಉತ್ತಮವಾಗಿ ಗ್ರೇಡ್ ಬರಬೇಕೆಂದರೆ ಏನು ಮಾಡಬೇಕು. ಯೋಜನೆಯಲ್ಲಿ 46000 ಕಾರ್ಯಕರ್ತರಿದ್ದು. ಬೇರೆ ಯಾವುದೇ ಸಂಸ್ಥೆಯಲ್ಲಿ ಇಷ್ಟು ಕಾರ್ಯಕರ್ತರಿಲ್ಲ ಸ್ವಾವಲಂಬನೆಯಾಗಿ ಬದುಕಲು ದಾರಿ ಮಾಡಿಕೊಟ್ಟಿದ್ದಾರೆ ನಮ್ಮ ಪೂಜ್ಯರು. ಸಂಘಕ್ಕೆ ವಿದಿಸುವ ಬಡ್ಡಿದರದ ಬಗ್ಗೆ ತಿಳಿಸಿದರು. ಮಾಸಾಶನ, ಸುಜ್ಞಾ ನಿಧಿಶಿಷ್ಯವೆತನ, ಇದರ ಬಗ್ಗೆ ತಿಳಿಸಿದರು. ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತರ್ ಇವರು ಪಂಚಾಯತ್ ವ್ಯಾಪ್ತಿಯಲ್ಲಿ ಬರುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿದರು. ಸಂಘದಿಂದ ತುಂಬಾ ಜನರಿಗೆ ಪ್ರಯೋಜನವಾಗಿದೆಯೆಂದು ತಿಳಿಸಿದರು. 10ನೆ ತರಗತಿಯಲ್ಲಿ ಅತಿ ಹೆಚ್ಚು 612 ಅಂಕ ಗಳಿಸದ ಕು!! ಶ್ರುತಿ ಹಾಗು 2ಪಿಯುಸಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ ದೀಕ್ಷಾ ಇವರನ್ನು ಗೌರವಿಸಲಾಯಿತು.
ಅತ್ಯುತ್ತಮ ಪ್ರಗತಿ ಬಂದು & ಸ್ವಸಹಾಯ ಸಂಘಗಳನ್ನು ಗುರುತಿಸಲಾಯಿತು. ನಿವೃತ್ತ ಸೈನಿಕರಾದ ಪುರಂದರ ದರ್ಬೆ, ಅಳಿಕೆ ವಲಯದ ವಾಲಯದ್ಯಕ್ಷರಾದ ರಾಜೇಂದ್ರ ರೈ, ವಲಯದ ಮೇಲ್ವಿಚಾರಕರು ಶೌರ್ಯ ವಿಪತ್ತು ಅಳಿಕೆ ಘಟಕದ ಸದಸ್ಯರು ಉಪಸ್ಥಿತರಿದ್ದರು. ಅಜ್ಜಿನಡ್ಕ ಸೇವಪ್ರತಿನಿಧಿ ಕಾವ್ಯ ಹಾಗೂ ಸರಸ್ವತಿಯವರು ಸಹಕರಿಸಿದರು.ಕಾರ್ಯದರ್ಶಿ ವಿಶಾಲಾಕ್ಷಿ ವರದಿ ಮಂಡಿಸಿದರು. ಸುಮತಿಯವರು ಸ್ವಾಗತಿಸಿ ಸೇವಪ್ರತಿನಿ ದಿ ರೂಪರವರು ವಂದಿಸಿದರು. ಜಯಶ್ರಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.