ನಾರಾವಿ ವಲಯದ ಕುತ್ಲೂರು A ಒಕ್ಕೂಟ: ಕಮಾಂಡೋ ವೀಲ್ ಚೇರ್‌ ವಿತರಣೆ

0
8

ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಗುರುವಯನಕೆರೆ , ನಾರಾವಿ ವಲಯದ ಕುತ್ಲೂರು A ಒಕ್ಕೂಟದ ಸದಸ್ಯರಾದ ಪುಷ್ಪ ರವರ ಅತ್ತೆ ಲಕ್ಷ್ಮಿ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಜನಮಂಗಲ ಕಾರ್ಯಕ್ರಮದಡಿ ಕಮಾಂಡೋ ವೀಲ್ ಚೇರನ್ನು ತಾಲೂಕು ಯೋಜನಾಧಿಕಾರಿಯವರಾದ ಅಶೋಕ್ ಬಿ. ಇವರು ವಿತರಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ವಿಶಾಲ ಕೆ., ಕುತ್ಲೂರು ಎ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕಾಂತಬೆಟ್ಟು , ಒಕ್ಕೂಟದ ಕಾರ್ಯದರ್ಶಿಯಾದ ಅರುಣಾ, ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಪಂಚಾಯತ್ ಸದಸ್ಯರಾದ ಸಂತೋಷ್, ಒಕ್ಕೂಟದ ಹಿರಿಯ ಸದಸ್ಯರಾದ ಡಾಕಯ್ಯ ಪೂಜಾರಿ, ಸೇವಾ ಪ್ರತಿನಿಧಿ ಉಷಾ ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here